ADVERTISEMENT

‘ರಜತ್ ಸಂಭ್ರಮ ಅಭಿಯಾನ’: ಪತ್ರಿಕೆ ವಿತರಕರಿಗೆ ಉಡುಗೊರೆ

‘ರಜತ್ ಸಂಭ್ರಮ ಅಭಿಯಾನ’ದಡಿ ರಜತ ಉಳ್ಳಾಗಡ್ಡಿಮಠ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 16:59 IST
Last Updated 20 ಫೆಬ್ರುವರಿ 2022, 16:59 IST
ಹುಬ್ಬಳ್ಳಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ‘ರಜತ ಸಂಭ್ರಮ ಅಭಿಯಾನ’ದಡಿ, ನಗರದ ಮೂರುಸಾವಿರ ಮಠದ ಆವರಣದಲ್ಲಿ ವೃತ್ತ ಪತ್ರಿಕೆ ಹಂಚುವವರಿಗೆ ಭಾನುವಾರ ಉಡುಗೊರೆ ವಿತರಿಸಿದರು
ಹುಬ್ಬಳ್ಳಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ‘ರಜತ ಸಂಭ್ರಮ ಅಭಿಯಾನ’ದಡಿ, ನಗರದ ಮೂರುಸಾವಿರ ಮಠದ ಆವರಣದಲ್ಲಿ ವೃತ್ತ ಪತ್ರಿಕೆ ಹಂಚುವವರಿಗೆ ಭಾನುವಾರ ಉಡುಗೊರೆ ವಿತರಿಸಿದರು   

ಹುಬ್ಬಳ್ಳಿ: ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ‘ರಜತ ಸಂಭ್ರಮ ಅಭಿಯಾನ’ದಡಿ, ನಗರದ ಮೂರುಸಾವಿರ ಮಠದ ಆವರಣದಲ್ಲಿ ವೃತ್ತ ಪತ್ರಿಕೆ ಹಂಚುವವರನ್ನು ಕೋವಿಡ್ ಯೋಧರು ಎಂದು ಪರಿಗಣಿಸಿ ಉಡುಗೊರೆ ವಿತರಿಸಿದರು.

ಬಳಿಕ ಮಾತನಾಡಿದ ಅವರು, ‘ಕೋವಿಡ್–19 ಆರಂಭದಲ್ಲಿ ದಿನಪತ್ರಿಕೆಗಳಿಂದಲೂ ಸೋಂಕು ಹರಡಲಿದೆ ಎಂದು ಗಾಳಿಸುದ್ದಿ ಹಬ್ಬಿಸಲಾಗಿತ್ತು. ಇದರಿಂದಾಗಿ ಅನೇಕ ಓದುಗರು ದಿನಪತ್ರಿಕೆಗಳನ್ನು ಖರೀದಿಸುವುದನ್ನೇ ನಿಲ್ಲಿಸಿದ್ದರು. ಇದರಿಂದಾಗಿ, ವಿತರಕರು ಆರ್ಥಿಕ ತೊಂದರೆಗೆ ಸಿಲುಕಿದ್ದರು. ಆದರೂ, ಎದೆಗುಂದದೆ ದಿನಪತ್ರಿಕೆಗಳಿಂದ ಸೋಂಕು ಹರಡುವುದಿಲ್ಲ ಎಂದು ಜಾಗೃತಿ ಮೂಡಿಸಿ, ತಮ್ಮ ಕಾಯಕವನ್ನು ಮುಂದುವರಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೋವಿಡ್ ಲಾಕ್‌ಡೌನ್ ಇದ್ದಾಗ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಇತರರಂತೆ ಸೇವೆ ಸಲ್ಲಿಸಿದ ವೃತ್ತಪತ್ರಿಕೆಗಳ ವಿತರಕರು ಸಹ ಕೋವಿಡ್ ಯೋಧರಾಗಿದ್ದಾರೆ. ರಜತ ಸಂಭ್ರಮ ಅಭಯಾನದಡಿ ವಿತರಕರನ್ನು ಗೌರವಿಸಲಾಗಿದೆ. ಮುಂದೆ ಆಟೊ ಚಾಲಕರು, ಪ್ಲಂಬರ್‌ಗಳು ಹಾಗೂ ಕ್ಷೌರಿಕರಿಗೂ ಉಡುಗೊರೆ ವಿತರಿಸಲಾಗುವುದು’ ಎಂದರು.

ADVERTISEMENT

‘ವೃತ್ತಪತ್ರಿಕೆ ವಿತರಿಸುವವರು ಬೆಳಗ್ಗಿ ಜಾವ ಪತ್ರಿಕೆಗಳನ್ನು ಜೋಡಿಸಿ ಇಟ್ಟುಕೊಳ್ಳುವುದಕ್ಕಾಗಿ ಶೆಡ್ ನಿರ್ಮಿಸಿ ಕೊಡಲು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ₹2 ಕೋಟಿಯನ್ನು ಮೀಸಲಿರಿಸಿತ್ತು. ಆದರೆ, ಇದುವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ವಿತರಕರಿಗೆ ಶೆಡ್ ನಿರ್ಮಿಸಿ ಕೊಡಲು ಹಾಗೂ ಪತ್ರಿಕಾ ವಿತರಕರ ನಿಗಮ ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಭರವಸೆ ನೀಡಿದರು.

ಹುಬ್ಬಳ್ಳಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸಿ.ಎಸ್. ಹಿರೇಮಠ ಮಾತನಾಡಿ, ‘ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲೂ ರಜತ್ ಅವರು ಪತ್ರಿಕೆ ವಿತರಕರಿಗೆ ಆಹಾರದ ಕಿಟ್ ವಿತರಿಸಿ ನೆರವಾಗಿದ್ದರು. ಈಗಲೂ ಅವರು ನಮಗೆ ಸಹಾಯ ಮಾಡಿದ್ದಾರೆ. ಅವರ ಬೆಳವಣಿಗೆಗೆ ನಮ್ಮ ಬೆಂಬಲ ಸದಾ ಇರುತ್ತದೆ’ ಎಂದರು.

ಅನೀಸ್ ಖೋಜೆ, ಸುನೀಲ್ ಮಠಪತಿ, ಲಕ್ಷ್ಮಣ ಗಡ್ಡಿ, ಜಶ್ವಂತ್ ಗಾಣದಾಳ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.