ADVERTISEMENT

ಮೂರು ವಿನ್ನರ್ ಟ್ರೋಫಿ ಬಾಚಿದ ಹರಲಾಪೂರ

ಧಾರವಾಡ ಜಿಲ್ಲಾ ಮಟ್ಟದ ಮಲ್ಲಕಂಬ ಸ್ಪರ್ಧೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:49 IST
Last Updated 11 ಆಗಸ್ಟ್ 2025, 2:49 IST
ಕುಂದಗೋಳ ತಾಲ್ಲೂಕಿನ ಹರಲಾಪೂರ ಗ್ರಾಮದಲ್ಲಿ ಜರುಗಿದ ಮಲ್ಲಕಂಬ ಸ್ಪರ್ಧೆಯಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು
ಕುಂದಗೋಳ ತಾಲ್ಲೂಕಿನ ಹರಲಾಪೂರ ಗ್ರಾಮದಲ್ಲಿ ಜರುಗಿದ ಮಲ್ಲಕಂಬ ಸ್ಪರ್ಧೆಯಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು   

ಹರಲಾಪೂರ (ಗುಡಗೇರಿ): ಕುಂದಗೋಳ ತಾಲ್ಲೂಕಿನ ಹರಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಜರುಗಿದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಮಲ್ಲಕಂಬ ಮತ್ತು ಹಗ್ಗದ ಮಲ್ಲಕಂಬ ಸ್ಪರ್ಧೆಯಲ್ಲಿ ಮೂರು ವಿನ್ನರ್ ಟ್ರೋಫಿಗಳನ್ನು ಹರಲಾಪೂರ ಗ್ರಾಮ ಬಾಚಿಕೂಂಡಿದ್ದು, ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.

14 ವರ್ಷದೊಳಗಿನ ಪ್ರಾಥಮಿಕ ವಿಭಾಗದ ಬಾಲಕಿಯರಲ್ಲಿ ದೀಪ ದೊಡ್ಡಮನಿ ಪ್ರಥಮ ಸ್ಥಾನ, ಸುಶ್ಮಿತಾ ಕೌದಿಮಠ ದ್ವಿತೀಯ ಸ್ಥಾನ, ಪ್ರಿಯಾ ಅಂಗಡಿ ತೃತೀಯ ಸ್ಥಾನ, ಕೀರ್ತಿ ಹರಕುಣಿ ಚತುರ್ಥ ಸ್ಥಾನ ಪಡೆದುಕೊಂಡರೆ, 14 ವರ್ಷದೊಳಗಿನ ಪ್ರಾಥಮಿಕ ಬಾಲಕರಲ್ಲಿ ಶ್ರೀಶಾಂತ್ ಕಮ್ಮಾರ್ ಪ್ರಥಮ ಸ್ಥಾನ, ಮಣಿಕಂಠ ಮುಗಳಿ ದ್ವಿತೀಯ ಸ್ಥಾನ, ಸಾಗರ್ ತೃತೀಯ ಸ್ಥಾನ, ವಿಶ್ವಜ್ಞ ಕುಲಕರ್ಣಿ ಚತುರ್ಥ ಸ್ಥಾನ ಪಡೆದಿದ್ದಾರೆ.

17 ವರ್ಷದೊಳಗಿನ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ಮುಗಳಿ ಪ್ರಥಮ ಸ್ಥಾನ, ರತ್ನ ಶೋಗೋಟಿ ದ್ವಿತೀಯ ಸ್ಥಾನ, ಅನ್ನಪೂರ್ಣ ತಸಿಲ್ದಾರ್ ತೃತೀಯ ಸ್ಥಾನ, ಹೇಮ ಬಳೆಗಾರ ಚತುರ್ಥ ಸ್ಥಾನ ಪಡೆದುಕೊಂಡಿದ್ದಾರೆ.

ADVERTISEMENT

17 ವರ್ಷದೊಳಗಿನ ಬಾಲಕರ ಪ್ರೌಢಶಾಲಾ ವಿಭಾಗದಲ್ಲಿ ಉಮೇಶ್ ದೊಡ್ಡಮನಿ ಪ್ರಥಮ ಸ್ಥಾನ ,ಪಂಚಾಕ್ಷರಿ ಹಿರೇಮಠ್ ದ್ವಿತೀಯ ಸ್ಥಾನ, ಬಸವರಾಜ ಕಟ್ಟಿಮನಿ ತೃತೀಯ ಸ್ಥಾನ, ಪ್ರೀತಮ್ ಸೂರುಣಗೆ ಚತುರ್ಥ ಸ್ಥಾನ ಪಡೆದುಕೊಂಡರು .

14 ವರ್ಷದೊಳಗಿನ ಬಾಲಕರು, 14 ವರ್ಷದೊಳಗಿನ ಬಾಲಕಿಯರು, 17 ವರ್ಷದೊಳಗಿನ ಬಾಲಕರ ಚಾಂಪಿಯನ್ ಟ್ರೋಪಿಯನ್‌ ಹರ್ಲಾಪುರ ಪಡೆದುಕೊಂಡರೆ , 17 ವರ್ಷದೊಳಗಿನ ಬಾಲಕಿಯರ ಚಾಂಪಿಯನ್ ಟ್ರೋಪಿಯನ್ನ ಶಿರುಗುಪ್ಪಿ ತಂಡವು ಪಡೆದುಕೊಂಡಿತು.

ಇದೇ ಸಂದರ್ಭದಲ್ಲಿ ಹರ್ಲಾಪುರ ಗ್ರಾಮದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಹಳೆಯ ಆಟಗಾರರಿಗೆ ಸನ್ಮಾನ ಮಾಡಲಾಯಿತು.

ಟ್ರೋಪಿಗಳನ್ನು ರಾಷ್ಟ್ರೀಯ ಮಲ್ಲಕಂಬ ಪಟು, ಯೋಧ ರವಿ ಓಲೆಕಾರ್, ನಿವೃತ್ತ ಮುಖ್ಯೋಪಾಧ್ಯಾಪಕ ಎನ್.ಓ.ಹಡಗಲಿ, ನಿವೃತ್ತ ದೈಹಿಕ ಶಿಕ್ಷಕ ಎಚ್.ಆರ್.ಕತ್ತಿ, ಪ್ರಗತಿಪರ ರೈತ ಅಬ್ದುಲ್ ಸಾಬ್ ನದಾಫ್ ಇವರು ಕೊಡುಗೆಯಾಗಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.