ADVERTISEMENT

ವಾರದಲ್ಲಿ ಮೂರು ದಿನ ಹುಬ್ಬಳ್ಳಿ–ದೆಹಲಿ ನೇರವಿಮಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 17:25 IST
Last Updated 9 ಅಕ್ಟೋಬರ್ 2019, 17:25 IST
ಸ್ಟಾರ್‌ ಏರ್‌ ಸಂಸ್ಥೆ ವಿಮಾನ
ಸ್ಟಾರ್‌ ಏರ್‌ ಸಂಸ್ಥೆ ವಿಮಾನ   

ಹುಬ್ಬಳ್ಳಿ: ವಾಣಿಜ್ಯ ನಗರಿಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ–ದೆಹಲಿ (ಹಿಂಡನ್‌) ನೇರ ವಿಮಾನಯಾನ ಸಂಪರ್ಕ ಆರಂಭಿಸಲು ಸ್ಟಾರ್‌ ಏರ್‌ ಸಂಸ್ಥೆ ಮುಂದಾಗಿದ್ದು, ಈ ಸೌಲಭ್ಯ ನ. 6ರಿಂದ ಆರಂಭವಾಗಲಿದೆ. ಮೂರು ದಿನಗಳ ಹಿಂದೆಯೇ ಮುಂಗಡ ಟಿಕೆಟ್ ಬುಕ್ಕಿಂಗ್‌ ಶುರುವಾಗಿದೆ.

ಹಿಂಡನ್‌ ವಿಮಾನ ನಿಲ್ದಾಣ ಉತ್ತರ ಪ್ರದೇಶದ ಗಾಜಿಯಾಬಾದ್‌ ಜಿಲ್ಲೆಯಲ್ಲಿದೆ. ಆದರೆ, ದೆಹಲಿ ಎನ್‌ಸಿಆರ್‌ ವ್ಯಾಪ್ತಿಗೆ ಬರುತ್ತದೆ. ಹಿಂಡನ್‌ ನಿಲ್ದಾಣದಿಂದ ದೆಹಲಿಯಿಂದ 35 ಕಿ.ಮೀ. ದೂರದಲ್ಲಿದೆ.

ಪ್ರತಿ ಬುಧವಾರ, ಗುರುವಾರ ಹಾಗೂ ಶನಿವಾರದಂದು ಮಧ್ಯಾಹ್ನ 1.05ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 3.45ಕ್ಕೆ ಹಿಂಡನ್‌ ತಲುಪಲಿದೆ. ಅಲ್ಲಿಂದ ಸಂಜೆ 4.10ಕ್ಕೆ ಹೊರಟು 6.50ಕ್ಕೆ ಹುಬ್ಬಳ್ಳಿಗೆ ಬರಲಿದೆ.

ADVERTISEMENT

‘ಆರಂಭದ ದಿನಗಳಲ್ಲಿ ವಾರದಲ್ಲಿ ಮೂರು ದಿನ ಹುಬ್ಬಳ್ಳಿ–ದೆಹಲಿಗೆ ನೇರ ವಿಮಾನ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರ ಬೇಡಿಕೆ ನೋಡಿಕೊಂಡು ಇದನ್ನು ವಿಸ್ತರಿಸಲಾಗುವುದು. ಉಡಾನ್ ಯೋಜನೆಯಲ್ಲಿ ಹೊಸ ವಿಮಾನ ಸಂಚಾರ ಆರಂಭಿಸಲಾಗಿದೆ’ ಎಂದು ಹುಬ್ಬಳ್ಳಿಯಲ್ಲಿರುವ ಸ್ಟಾರ್‌ ಸಂಸ್ಥೆ ಸಿಬ್ಬಂದಿ ತಿಳಿಸಿದರು.

ಸ್ಟಾರ್‌ ಏರ್‌ ಸಂಸ್ಥೆಯ ಎರಡು ವಿಮಾನಗಳು ಈಗಾಗಲೇ ಹುಬ್ಬಳ್ಳಿಯಿಂದ ತಿರುಪತಿ ಮತ್ತು ಬೆಂಗಳೂರಿಗೆ ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.