ADVERTISEMENT

ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿ: 136 ಆಟಗಾರರು ಹರಾಜು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 16:01 IST
Last Updated 30 ನವೆಂಬರ್ 2021, 16:01 IST
ಹುಬ್ಬಳ್ಳಿಯಲ್ಲಿ ನಡೆದ ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಆಟಗಾರರಾದ (ಎಡದಿಂದ) ಪ್ರಭಂಜನ ಬಾಗಲ್, ಅಬ್ದುಲ್‌ ಶಮಿದಿವಾನ್‌ ಅಲಿ, ಅಖಿಲ್‌, ವೀರಜ್‌ ಹಾವೇರಿ, ಸ್ವರ್ಣ ಗ್ರೂಪ್‌ ಕಂಪನಿಯ ಆಡಳಿತ ನಿರ್ದೇಶಕ ವಿ.ಎಸ್‌.ವಿ. ಪ್ರಸಾದ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಗೌರವ ಕಾರ್ಯದರ್ಶಿ ಪಂಕಜ ಮುನಾವರ, ಆಟಗಾರರಾದ ವಿನಾಯಕ ಪಾಂಡೆ, ಸೋಹನ ಕಲ್ಲೂರ, ಆಕಾಶ ಕುಲಕರ್ಣಿ ಮತ್ತು ವೃಷಭ ಪಾಟೀಲ ಇದ್ದಾರೆ

ಹುಬ್ಬಳ್ಳಿ: ನಗರದಲ್ಲಿ ಡಿ. 12ರಿಂದ ಆಯೋಜನೆಯಾಗಿರುವ 16 ವರ್ಷದ ಒಳಗಿನವರ ಸ್ವರ್ಣ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಜೂನಿಯರ್ ಕ್ರಿಕೆಟ್‌ ಟೂರ್ನಿಯ ನಾಲ್ಕನೇ ಆವೃತ್ತಿಗೆ ಭಾನುವಾರ ನಡೆದ ಹರಾಜಿನಲ್ಲಿ ಎಂಟು ತಂಡಗಳು ಸೇರಿ ಒಟ್ಟು 136 ಆಟಗಾರರನ್ನು ಖರೀದಿಸಿದವು.

ಸ್ಥಳೀಯ ಹಾಗೂ ರಾಜ್ಯಮಟ್ಟದ ಹಲವು ಟೂರ್ನಿಗಳಲ್ಲಿ ಆಡಿದವರು ಸೇರಿದಂತೆ ಒಟ್ಟು 254 ಆಟಗಾರರು ಹರಾಜಿನಲ್ಲಿದ್ದರು. ಪ್ರತಿ ತಂಡಗಳು ತಲಾ 17 ಆಟಗಾರರನ್ನು ಖರೀದಿಸಿದವು. ಅಂಕಗಳ ಆಧಾರದ ಮೇಲೆ ಹರಾಜು ನಡೆಯಿತು. ಇದೇ ವೇಳೆ ತಂಡಗಳ ಪೋಷಾಕು ಬಿಡುಗಡೆ, ಟ್ರೋಫಿಗಳ ಅನಾವರಣ ಮತ್ತು ಟೂರ್ನಿಯ ಗೀತೆ ಬಿಡುಗಡೆ ಮಾಡಲಾಯಿತು. ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಮತ್ತು ಗದಗ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ತಂಡಗಳ ಮಾಲೀಕರಾದ ವೀರಣ್ಣ ಉಂಡಿ (ದುರ್ಗಾ ಟೈಟನ್ಸ್‌), ಪ್ರಕಾಶ ಪಾಟೀಲ, ಮಲೀಕ್ ಪಗಾಡ (ಆ್ಯಕ್ಸಸ್‌ ಹುಬ್ಬಳ್ಳಿ ಮಾಸ್ಟರ್ಸ್‌), ವಿಜಯೇಂದ್ರ ಬಾಗಲ್‌, ದಿವ್ಯಾ ಬಾಗಲ್‌ (ಸಫ್ರಾನ್‌ ಸ್ಟ್ರೈಕರ್ಸ್‌), ಶಿವಾನಂದ ನಾಯಕ (ಎಸ್‌ಆರ್‌ಎಂ ಪಿಂಕ್‌ ಪ್ಯಾಂಥರ್ಸ್‌), ವೆಂಕಟೇಶ ಕರಿಶಂಕ್ರಣ್ಣವರ, ವಿಜಯ ಕುಲಕರ್ಣಿ (ವಿವಿ ಸೂಪರ್‌ ಕಿಂಗ್ಸ್‌), ರವಿಚಂದ್ರನ್‌ ರೆಡ್ಡಿ (ಗಾಡ್‌ ಗಿಫ್ಟ್‌ ವಾರಿಯರ್ಸ್‌), ಮಲ್ಲಿಕಾರ್ಜುನ ಭೂಪಾನಿ (ನಮ್ಮ ಗದಗ ಕ್ರಿಕೆಟರ್ಸ್‌), ಪ್ರಣಯ ಶೆಟ್ಟಿ (ಬಿಎಸ್‌ಸಿ ಕೆ.ಆರ್‌. ಶೆಟ್ಟಿ ಕಿಂಗ್ಸ್‌) ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮನೀಷ ಠಕ್ಕರ್‌ ಹರಾಜು ನಡೆಸಿಕೊಟ್ಟರು.

ADVERTISEMENT

ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಟ್ರಸ್ಟಿ ಕೈಲಾಶ ಮುನಾವರ, ಅಮಿತ್‌ ಭೂಸದ, ನಿಖಿಲ್‌ ಭೂಸದ, ಅಭಿಜಿತ್‌ ಬೆಂಗೇರಿ ಹಾಗೂ ವಿನಾಯಕ ಗುಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.