ಕಲಘಟಗಿ: ತಾಲ್ಲೂಕಿನ ಸ್ವಾಮಿ ಹೊಂಡದಲ್ಲಿ ಯುವಕನೋರ್ವ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಹುಬ್ಬಳ್ಳಿಯ ಅಜರ್ ಅಹ್ಮದ್ ದೊಡ್ಡಮನಿ (28) ಮೃತಪಟ್ಟವರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಭಾನುವಾರ ಹೊರತೆಗೆದರು.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳದ ಠಾಣಾಧಿಕಾರಿ ಅರುಣ್ ಮಾಳೋದೆ, ಟಿ.ಕೆ ರಾಠೋಡ, ಉಮೇಶ ತೆಂಬದ, ಹನುಮಂತ ರಜಪೂತ, ಸಂಜೀವ ದೊಡ್ಡಮನಿ, ಕಿರಣ್ ಕುರುಬೆಟ್ ಕಾರ್ಯಚರಣೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.