ಕಲಘಟಗಿ: ಕರ್ನಾಟಕ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕೋಶ, ಸೋನಿಯಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲ್ಲೂಕಿನ ಜಿ.ಬಸವನಕೊಪ್ಪ ಗ್ರಾಮದಿಂದ ನೀರಸಾಗರ ಮಾರ್ಗದಲ್ಲಿ ಹಸಿರು ಗ್ರಾಮ ಅಭಿಯಾನದ ಅಂಗವಾಗಿ ಸಸಿ ನೆಡಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿದ ಸೋನಿಯಾ ಶಿಕ್ಷಣ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ಕಿರಣ ತೋಟಗಂಟಿ ಮಾತನಾಡಿ, ಎಲ್ಲರೂ ಆರೋಗ್ಯವಾಗಿ ಇರಬೇಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರಬೇಕು. ಅರಣ್ಯ ಉಳಿಸಬೇಕು ಎಂದು ಹೇಳಿದರು.
ಪ್ರೊ.ಜಯಾನಂದ ಹಟ್ಟಿ, ಶಿವಯೋಗಿ ಹಾವೇರಿ ಮಾತನಾಡಿದರು.
ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ, ಶಿವಯ್ಯ ಸಂಪಗಾವಿಮಠ, ಸಿದ್ದನಗೌಡ ಹೊಸಮನಿ, ಹನುಮಂತರಾಯ ತೋಟದಮನಿ, ವಿಜಯ ಸಾಲಿಮಠ, ವೀರಯ್ಯ ಕೆಂಬಾವಿಮಠ, ಸಂತೋಷ ಬಶೆಟ್ಟಿ, ಗ್ರಾಮಸ್ಥರು ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.