ADVERTISEMENT

ಹೈದರಾಬಾದ್ ಎನ್‌ಕೌಂಟರ್ ಕ್ರಿಮಿನಲ್‌ಗಳಿಗೆ ಎಚ್ಚರಿಕೆ ಗಂಟೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 10:33 IST
Last Updated 6 ಡಿಸೆಂಬರ್ 2019, 10:33 IST
   

ಹುಬ್ಬಳ್ಳಿ: ತೆಲಂಗಾಣ ಪೊಲೀಸರು ಸ್ಥಳೀಯ ಜನರ ಭಾವನೆಗಳಿಗೆ ಅನುಗುಣವಾಗಿ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆಯಾದರೂ, ಕ್ರಿಮಿನಲ್‌ಗಳಿಗೆಎನ್‌ಕೌಂಟರ್ ಎಚ್ಚರಿಕೆಯ ಗಂಟೆಯಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಒಂದು ವೇಳೆ ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದರೆ ಪರಿಸ್ಥಿತಿ ಎನಾಗುತ್ತಿತ್ತು ಎಂದು ಪ್ರಶ್ನಿಸಿದರು‌.

ಹೀನ ಕೃತ್ಯ ಮಾಡುವ ಆರೋಪಿಗಳಿಗೆ ಇದು ತಕ್ಕ ಶಿಕ್ಷೆ ಎಂದರು.

ADVERTISEMENT

ಪೊಲೀಸರ ಕ್ರಮಕ್ಕೆ ವಿರೋಧ ಕೂಡ ವ್ಯಕ್ತವಾಗುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮೇಲ್ನೋಟಕ್ಕೆ ಪೊಲೀಸರು ‌ಮಾಡಿದ ಕೆಲಸ ಉತ್ತಮ ಎಂದು ಕಾಣಿಸುತ್ತಿದೆ. ವಿಶ್ವನಾಥ ಸಜ್ಜನರ ದಕ್ಷ ಅಧಿಕಾರಿ. ನಮ್ಮ ಕುಟುಂಬದ ಸ್ನೇಹಿತರೂ ಆಗಿದ್ದಾರೆ ಎಂದರು.

ಪೊಲೀಸರ ಕ್ರಮ ಸರಿ: ಪ್ರದೀಪ್ ಶೆಟ್ಟರ್

ಅತ್ಯಾಚಾರದಆರೋಪಿಗಳಿಗೆ ಗುಂಡಿಕ್ಕಿದಪೊಲೀಸರ ಕ್ರಮ ಸರಿಯಾಗಿದೆ‌. ಇದನ್ನು ದೇಶಾದ್ಯಂತ ಜನ ಸಂಭ್ರಮಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.