ADVERTISEMENT

ಸಿ.ಟಿ. ರವಿ, ಹೆಬ್ಬಾಳಕರ ಪ್ರಕರಣ ಶೀಘ್ರ ಇತ್ಯರ್ಥ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 15:51 IST
Last Updated 20 ಫೆಬ್ರುವರಿ 2025, 15:51 IST
<div class="paragraphs"><p>ಬಸವರಾಜ ಹೊರಟ್ಟಿ</p></div>

ಬಸವರಾಜ ಹೊರಟ್ಟಿ

   

ಹುಬ್ಬಳ್ಳಿ: ‘ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪ್ರಕರಣವನ್ನು ನೀತಿ ನಿರೂಪಣೆ ಸಮಿತಿಗೆ ಒಪ್ಪಿಸಲಾಗಿದ್ದು, ಶೀಘ್ರವೇ ಬಗೆಹರಿಯಲಿದೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

‘ನೀತಿ ನಿರೂಪಣೆ ಸಮಿತಿಯ ಸಭೆ ಇನ್ನೂ ಕರೆದಿಲ್ಲ. ಈ ನಡುವೆಯೇ ನಾನು ಅವರಿಬ್ಬರ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು, ಸಮಸ್ಯೆ ಪರಿಹರಿಸಲು ಪ್ರಯತ್ನಿಸುವೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಸಚಿವೆ ಲಕ್ಷ್ಮಿ ಅವರಿಗೆ ಆರೋಗ್ಯ ಸುಧಾರಿಸಿದೆ. ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಇಬ್ಬರನ್ನೂ ಜೊತೆಯಲ್ಲೇ ಕೂರಿಸಿಕೊಂಡು, ಪ್ರಕರಣವನ್ನು ಇತ್ಯರ್ಥಪಡಿಸುವೆ. ಭಾವೋದ್ವೇಗದಿಂದ ಇಂತಹ ಸಮಸ್ಯೆ ಸೃಷ್ಟಿ ಆಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.