ADVERTISEMENT

ಹುಬ್ಬಳ್ಳಿ: ಮಾನಸ್ತoಭ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 16:42 IST
Last Updated 28 ಅಕ್ಟೋಬರ್ 2020, 16:42 IST
ವರ್ಧಮಾನಗಿರಿಯಲ್ಲಿ ಮಾನಸ್ತoಭ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು
ವರ್ಧಮಾನಗಿರಿಯಲ್ಲಿ ಮಾನಸ್ತoಭ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು   

ಹುಬ್ಬಳ್ಳಿ: ಇಲ್ಲಿಗೆ ಸಮೀಪದ ಬುಡರಸಿಂಗಿಯ ವರ್ಧಮಾನಗಿರಿ ಕ್ಷೇತ್ರದಲ್ಲಿ 11ನೇ ಶತಮಾನದ ಚತುರ್ವಿಂಶ ಜಿನರ ಪ್ರಾಚೀನ ಪ್ರತಿಮೆಯನ್ನು ಹೊಂದಿರುವ ಬಸದಿಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಾನಸ್ತoಭಕ್ಕೆ ಭೂಮಿಪೂಜೆ ನಡೆಯಿತು.

ವಿಜಯದಶಮಿ ದಿನದಂದು ನಡೆದ ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಸನ್ಮತಿ ಹೋತಪೇಟಿ, ಸಚಿನ್ ಹೋತಪೇಟಿ ಪೂಜೆ ನೆರವೇರಿಸಿದರು. ವರೂರು ನವಗ್ರಹ ತೀರ್ಥದ ಆಚಾರ್ಯ ಗುಣಧರನಂದಿ ಮಹಾರಾಜರು ಮತ್ತು ಧರ್ಮಸೇನ ಭಟ್ಟಾರಕರ ಮಾರ್ಗದರ್ಶನದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

ಸಮಾಜದ ಪ್ರಮುಖರಾದ ಶಾಂತಿನಾಥ ಹೋತಪೇಟಿ, ಸರೋಜಾ ಹೋತಪೇಟಿ, ಜಯಶ್ರೀ ಹೋತಪೇಟಿ, ಚಂಪಾ ಹೋತಪೇಟಿ, ಪ್ರಣಮ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್.ಸಿ. ಜೈನರ, ಸದಸ್ಯರಾದ ಧನಪಾಲ್ ಮುನ್ನೊಳ್ಳಿ, ರತ್ನಾಕರ ದಿನಕರ, ಬಾಪೂಸಾಹೇಬ ಚೌಗುಲೆ, ಭರತ್ ಮುತ್ತಗಿ, ಆನಂದ ಬಸ್ತಿ ಇದ್ದರು. 21 ಅಡಿ ಉದ್ದದ ಮಾನಸ್ತಂಭ ತಲೆ ಎತ್ತಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.