ADVERTISEMENT

ಹುಬ್ಬಳ್ಳಿ ಬದಲು ಮಂಗಳೂರಿನಲ್ಲಿ ಲ್ಯಾಂಡ್ ಆದ ವಿಮಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 16:35 IST
Last Updated 3 ಏಪ್ರಿಲ್ 2021, 16:35 IST

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಇಳಿಯಬೇಕಿದ್ದ ಬೆಂಗಳೂರು–ಹುಬ್ಬಳ್ಳಿ (6E 7227) ಇಂಡಿಗೊ ವಿಮಾನವು ಮೋಡಕವಿದ ವಾತಾವರಣದ ಕಾರಣದಿಂದ ಮಂಗಳೂರಿನಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ.

‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಹೊರಟಿದ್ದ ವಿಮಾನ ಬೆ. 7.20ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಬೇಕಿತ್ತು. ಇಲ್ಲಿ ಮೋಡಕವಿದ ವಾತಾವರಣವಿದ್ದ ಕಾರಣ ವಿಮಾನ ಇಳಿಸಲು ಸಾಧ್ಯವಾಗದೇ 20 ನಿಮಿಷ ಆಗಸದಲ್ಲಿಯೇ ಹಾರಾಡಿಸಬೇಕಾಯಿತು. ಬಳಿಕ ಪೈಲಟ್‌ ವಿಮಾನವನ್ನು ಮಂಗಳೂರಿನ ಕಡೆ ತಿರುಗಿಸಲು ನಿರ್ಧರಿಸಿದರು’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಕುಮಾರ ಠಾಕರೆ ತಿಳಿಸಿದರು.

ಮೋಡ ಕವಿದ ವಾತಾವರಣ ತಿಳಿಯಾದ ಬಳಿಕ ಪುನಃ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಮಾನ ಹುಬ್ಬಳ್ಳಿಗೆ ಮರಳಿ ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.