ADVERTISEMENT

‘ಶರಣರ ಸಂಸ್ಕೃತಿ ಬೆಳೆಸುತ್ತಿರುವ ಮಠಗಳು’

ಗವಿಮಠದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೊತ್ಸವ

​ಪ್ರಜಾವಾಣಿ ವಾರ್ತೆ
Published 6 ಮೇ 2022, 5:10 IST
Last Updated 6 ಮೇ 2022, 5:10 IST
ಗವಿಮಠದ ಸಿದ್ದಲಿಂಗೇಶ್ವರ ಜಾತ್ರಾ ಮಹೊತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಅಬ್ದುಲ್ ಖಾದರ ನಡಕಟ್ಟಿ ಅವರಿಗೆ ಸಮನ್ವಯ ಪ್ರಶಸ್ತಿ ನೀಡಿ ಗೌರವಿಸಿದರು
ಗವಿಮಠದ ಸಿದ್ದಲಿಂಗೇಶ್ವರ ಜಾತ್ರಾ ಮಹೊತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಅಬ್ದುಲ್ ಖಾದರ ನಡಕಟ್ಟಿ ಅವರಿಗೆ ಸಮನ್ವಯ ಪ್ರಶಸ್ತಿ ನೀಡಿ ಗೌರವಿಸಿದರು   

ನವಲಗುಂದ: ಮಠಗಳು ಸಾಮಾಜಿಕ ಕಳಕಳಿಯಿಂದ ಧಾರ್ಮಿಕ ಕ್ಷೇತ್ರದಲ್ಲಿ ನಾಡಿನ ಜನತೆಗೆ ಸಂಸ್ಕಾರ ನೀಡುವ ಮೂಲಕ ಶರಣರ ಸಂಸ್ಕೃತಿಯನ್ನು ಬೆಳೆಸುವಲ್ಲಿ ನಿರಂತರವಾಗಿ ಶ್ರಮವಹಿಸಿಸುತ್ತಿವೆ ಎಂದು ಘಟಪ್ರಭ ಮುಂಡರಗಿ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುರವಾರ ಇಲ್ಲಿನ ಗವಿಮಠದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಗವಿಮಠದ ಅಭಿವೃದ್ಧಿಗೆ ₹1ಕೋಟಿ ಅನುದಾನ ನೀಡುವುದಾಗಿ ಭರಸವೆ ನೀಡಿದರು. ಮಾಜಿ ಸಚಿವ ಕೆ.ಎನ್.ಗಡ್ಡಿ ಮಾತನಾಡಿದರು.

ADVERTISEMENT

ಮಠದಿಂದ ನೀಡಲಾದ ಸರ್ವಧರ್ಮ ಸಮನ್ವ ಪ್ರಶಸ್ತಿಯನ್ನು ಕೃಷಿ ಉಪಕರಣ ಸಂಶೋಧನಕಾರ ಅಬ್ದುಲ್ ಖಾದರ ನಡಕಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.

ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮೃತ್ಯುಂಜಯ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಗುರುಸಿದ್ದೇಶ್ವರ ಸ್ವಾಮಿಜಿ, ಶಿವಪೂಜೇಶ್ವರ ಸ್ವಾಮೀಜಿ ಉಪಸ್ಥಿರಿದ್ದರು. ಮಠದ ಶಿಕ್ಷಣ ಸಂಸ್ಥೆಯ ಎಸ್.ಎಂ.ಪಟ್ಟಣಶೆಟ್ಟಿ, ಪ್ರೊ. ಎಸ್.ಕೆ. ದೋಟಿಕಲ್, ಜಿಲ್ಲಾ ಪ್ರತ್ರಕರ್ತ ಸಂಘದ ಅಧ್ಯಕ್ಷ ಲೋಚನೇಶ ಹೊಗಾರ, ಸುಶಿಲೇಂದ್ರ ಕುಂದರಗಿ, ಗಣಪತಿ ಗಂಗೊಳ್ಳಿ, ಸಿದ್ದಲಿಂಗಯ್ಯ ಹಿರೇಮಠ, ನಿಂಗಪ್ಪ ಚವಡಿ, ಮತ್ತಿರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.