ADVERTISEMENT

ಹುಬ್ಬಳ್ಳಿ | ಅಪಘಾತ ಸ್ಥಳ: ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:57 IST
Last Updated 22 ಜನವರಿ 2026, 2:57 IST
<div class="paragraphs"><p>&nbsp; ಸತೀಶ ಜಾರಕಿಹೊಳಿ</p></div>

  ಸತೀಶ ಜಾರಕಿಹೊಳಿ

   

ಹುಬ್ಬಳ್ಳಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಬುಧವಾರ ನಗರದ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಭೇಟಿ ನೀಡಿ, ಅಪಘಾತ ಸ್ಥಳಗಳ ಕುರಿತು ಮಾಹಿತಿ ಪಡೆದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಎಂ. ಪ್ರಿಯಾಂಗಾ ಅವರು, ಸಂಸ್ಥೆಯ ಭದ್ರತಾ ಮತ್ತು ಜಾಗೃತ ವಿಭಾಗದ ವತಿಯಿಂದ ನಡೆಸಿರುವ ಅಪಘಾತ ಸ್ಥಳಗಳ ಸಮೀಕ್ಷಾ ವರದಿಯ ದಾಖಲೆಗಳನ್ನು ಸಚಿವರಿಗೆ ನೀಡಿ, ವಿವರಿಸಿದರು. ಅಪಘಾತ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಯೋಜನೆಯ ಕುರಿತು ಚರ್ಚಿಸಿದರು.

ADVERTISEMENT

ಸಚಿತ್ರವಾಗಿ ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ ಅವರು, ಸಂಸ್ಥೆ ವ್ಯಾಪ್ತಿಯ ಎಲ್ಲ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕರೆದು ಸಭೆ ನಡೆಸುವುದಾಗಿ ತಿಳಿಸಿದರು. ‘ಅಪಘಾತ ಸ್ಥಳಗಳಲ್ಲಿ ಯಾವೆಲ್ಲ ಮುಂಜಾಗ್ರತಾ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರಿಹಾರ ಪಡೆಯಬಹುದು ಎನ್ನುವುದನ್ನು ಚರ್ಚಿಸಲಾಗುವುದು’ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಸುನಿಲ ಹನುಮನ್ನವರ, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಗಣೇಶ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.