ADVERTISEMENT

ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:27 IST
Last Updated 21 ಜನವರಿ 2022, 16:27 IST

ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ, ಹುಬ್ಬಳ್ಳಿಯ ಜೀವಿ ಕಲಾ ಬಳಗದಿಂದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧಿಗಳು ತಾವಿದ್ದ ಸ್ಥಳದಿಂದಲೇ ಗೀತೆಗಳನ್ನು ಹಾಡಿ, ಅದರ ವಿಡಿಯೊ ಕ್ಲಿಪ್‌ ಅನ್ನು ವಾಟ್ಸ್‌ಆ್ಯಪ್‌ ಮೂಲಕ ಕಳಿಸಬೇಕು.

ಮೂರು ಹಂತದಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಹಂತದಲ್ಲಿ 5ನೇ ತರಗತಿಯಿಂದ 8ನೇ ತರಗತಿಯವರೆಗೆ, ಎರಡನೇ ಹಂತದಲ್ಲಿ 9ರಿಂದ 10ನೇ ತರಗತಿವರೆಗೆ ಹಾಗೂ ಮೂರನೇ ಹಂತದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯಲಿದೆ. ಆಯಾ ಹಂತಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

ಸ್ಪರ್ಧಿಗಳು ಸಮಗ್ರತೆ ಸಾರುವ ಕನ್ನಡ ದೇಶಭಕ್ತಿ ಗೀತೆಗಳನ್ನು 3 ನಿಮಿಷ ಮೀರದಂತೆ ಹಾಡಬೇಕು. ಕರೋಕೆ ಅಥವಾ ಪಕ್ಕ ವಾದ್ಯಗಳನ್ನು ಬಳಸುವಂತಿಲ್ಲ. ಬಳಗದ ಸದಸ್ಯರ ಮಕ್ಕಳು ಸ್ಪರ್ಧಿಸುವಂತಿಲ್ಲ. ವಿಡಿಯೊಗಳನ್ನು ಜ. 25ರಂದು ಸಂಜೆ 6 ಗಂಟೆಯೊಳಗೆ ವಾಟ್ಸ್‌ಆ್ಯಪ್‌ ಸಂಖ್ಯೆ: 80500 31271ಗೆ ಕಳಿಸಬೇಕು ಎಂದು ಬಳಗದ ಅಧ್ಯಕ್ಷ ಗದಿಗೆಯ್ಯಾ ಹಿರೇಮಠ ಹಾಗೂ ಕಾರ್ಯದರ್ಶಿ ಮಂಜುನಾಥಗೌಡ ಪಾಟೀಲ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.