ADVERTISEMENT

ಅಣ್ಣಿಗೇರಿ | ಸಂಕಷ್ಟದಲ್ಲಿ ಜನ: ಸೀಲ್‌ಡೌನ್‌ ನಡುವೆಯೂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 16:53 IST
Last Updated 17 ಜೂನ್ 2020, 16:53 IST
ಅಣ್ಣಿಗೇರಿಯಲ್ಲಿ ಸೀಲ್‌ಡೌನ್ ಆದ ಹಳೇ ಅಮೃತೇಶ್ವರ ನಗರದ ನಿವಾಸಿಗಳು ಬುಧವಾರ ಪ್ರತಿಭಟನೆ ಮಾಡಿದರು
ಅಣ್ಣಿಗೇರಿಯಲ್ಲಿ ಸೀಲ್‌ಡೌನ್ ಆದ ಹಳೇ ಅಮೃತೇಶ್ವರ ನಗರದ ನಿವಾಸಿಗಳು ಬುಧವಾರ ಪ್ರತಿಭಟನೆ ಮಾಡಿದರು   

ಅಣ್ಣಿಗೇರಿ: ಕೊರೊನಾ ಸೋಂಕು ದೃಢಪಟ್ಟು ಸೀಲ್‌ಡೌನ್‌ ಆಗಿರುವಪಟ್ಟಣದ ಹಳೇ ಅಮೃತೇಶ್ವರ ನಗರದಲ್ಲಿ ವಾಸವಿರುವ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಆದ್ದರಿಂದ ನೆರವಾಗಬೇಕು ಎಂದು ಬುಧವಾರ ಸೀಲ್‌ಡೌನ್‌ ಪ್ರದೇಶದಲ್ಲೇ ಪ್ರತಿಭಟನೆ ಮಾಡಿದರು.

ಈ ಪ್ರದೇಶದಲ್ಲಿ ಒಟ್ಟು 240 ಕುಟುಂಬಗಳು ವಾಸವಿದ್ದು, ಅದರಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ದಿನಗೂಲಿಯನ್ನೇ ನೆಚ್ಚಿಕೊಂಡಿವೆ. ಎರಡೂವರೆ ತಿಂಗಳು ಲಾಕ್‌ಡೌನ್‌ ಆಗಿದ್ದರಿಂದ ಇಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆಕಳೆದ 9 ದಿನಗಳಿಂದ ಯಾವುದೇ ಕೆಲಸವಿಲ್ಲದ ಕಾರಣ ಮನೆ ನಿರ್ವಹಣೆ ಕೂಡ ಕಷ್ಟವಾಗಿದೆ. ಸಂಕಷ್ಟದ ಸಂದರ್ಭದಲ್ಲೂ ಜಿಲ್ಲಾಡಳಿತ ನೆರವಾಗುವುದಿಲ್ಲವೆಂದರೆ ಹೇಗೆ? ಎಂದು ಸ್ಥಳೀಯರು ಪ್ರಶ್ನಿಸಿದರು.

ಸ್ವಸಹಾಯ ಗುಂಪುಗಳಲ್ಲಿ ಮತ್ತು ಖಾಸಗಿ ಫೈನಾನ್ಸ್‌ಗಳಲ್ಲಿ ಸಾಲ ಪಡೆದಿದ್ದೇವೆ. ಸಾಲ ಕಟ್ಟುವಂತೆ ಸಂಬಂಧಪಟ್ಟವರು ಕರೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ನಮ್ಮ ಕಷ್ಟಕ್ಕೆ ನೆರವಾಗದಿದ್ದರೆ ಸೀಲ್‌ಡೌನ್‌ ಪ್ರದೇಶದಿಂದ ಹೊರ ಹೋಗಲು ಅನುಮತಿಯಾದರೂ ಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಂದತಹಶೀಲ್ದಾರ್ ಕೊಟ್ರೇಶ ಗಾಳಿ ಸಮಸ್ಯೆಗಳನ್ನು ಆಲಿಸಿ, ಇದನ್ನುಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದರು.ವಿ.ಎಸ್.ಬಣಗಾರ, ರಮೇಶ ಭದ್ರಾಪೂರ, ಬಿ.ಎಸ್.ಹೊಳೆಣ್ಣವರ, ಸಂಜು ಸಮಗಾರ, ಜಗದೀಶ ಅಬ್ಬಿಗೇರಿಮಠ, ಪ್ರಕಾಶ ಕೊಂಡಗೋಳಿ, ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.