ADVERTISEMENT

ಆಟಗಾರರ ಹರಾಜು: ಸುಶೀತ್‌ಗೆ ಹೆಚ್ಚು ಪಾಯಿಂಟ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 15:08 IST
Last Updated 22 ಸೆಪ್ಟೆಂಬರ್ 2019, 15:08 IST
ಹುಬ್ಬಳ್ಳಿಯಲ್ಲಿ ಭಾನುವಾರ ಅಸ್ತ್ರ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಆಟಗಾರರ ಹರಾಜಿನ ವೇಳೆ ತಂಡಗಳ ಪೋಷಾಕುಗಳನ್ನು ಅನಾವರಣ ಮಾಡಲಾಯಿತು
ಹುಬ್ಬಳ್ಳಿಯಲ್ಲಿ ಭಾನುವಾರ ಅಸ್ತ್ರ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಆಟಗಾರರ ಹರಾಜಿನ ವೇಳೆ ತಂಡಗಳ ಪೋಷಾಕುಗಳನ್ನು ಅನಾವರಣ ಮಾಡಲಾಯಿತು   

ಹುಬ್ಬಳ್ಳಿ: ಮುಂದಿನ ತಿಂಗಳು ನಗರದ ನೆಹರೂ ಕ್ರೀಡಾಂಗಣದಲ್ಲಿನಡೆಯಲಿರುವಅಸ್ತ್ರ ಪ್ರೀಮಿಯರ್‌ ಲೀಗ್‌ (ಎಪಿಎಲ್‌) ಎರಡನೇ ಆವೃತ್ತಿಯ ಕ್ರಿಕೆಟ್‌ ಟೂರ್ನಿಗೆ ಭಾನುವಾರ ನಡೆದ ಆಟಗಾರರ ಹರಾಜಿನಲ್ಲಿ ಸುಶೀತ್‌ ಶೆಟ್ಟಿ ಹೆಚ್ಚು ಪಾಯಿಂಟ್‌ಗೆ ಮಾರಾಟವಾದರು.

ಎಸ್‌ಕೆಪಿ ಟೈಟನ್ಸ್‌ ಧಾರವಾಡ ತಂಡ ಸುಶೀತ್‌ಗೆ 17 ಸಾವಿರ ಪಾಯಿಂಟ್ಸ್‌ ನೀಡಿ ಖರೀದಿಸಿತು. ಅಭಯ ಕ್ರಿಕೆಟ್‌ ಕ್ಲಬ್‌ ಅಕ್ಷಯ ಶೆಟ್ಟಿಗೆ 15 ಸಾವಿರ ಮತ್ತು ಮೈಟ್‌ ರೈಡರ್ಸ್‌ ತಂಡ 14 ಸಾವಿರ ಪಾಯಿಂಟ್ಸ್‌ಗೆ ಪ್ರಜ್ವಲ್‌ ಅವರನ್ನು ಖರೀದಿಸಿತು. ಹರಾಜಿನಲ್ಲಿ ಪಾಲ್ಗೊಂಡಿದ್ದ ಒಟ್ಟು 150 ಆಟಗಾರ ಪೈಕಿ 126 ಜನ ಮಾರಾಟವಾದರು. ಅ. 19 ಹಾಗೂ 20ರಂದು ಟೂರ್ನಿ ಜರುಗಲಿದೆ. ಹರಾಜಿಗೂ ಮೊದಲೇ ಎಲ್ಲ ಏಳು ತಂಡಗಳು ತಲಾ ನಾಲ್ವರು ಐಕಾನ್‌ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದವು.

ವಿವಿಧ ತಂಡಗಳ ಮಾಲೀಕರಾದ ರಂಜೀತ್‌ ಶೆಟ್ಟಿ (ಉಡುಪಿ ಹಾಸ್ಟೆಟಲಿಟಿ ಸರ್ವಿಸ್‌), ಜಯರಾಜ, ಪ್ರಶಾಂತ, ಪ್ರಹ್ಲಾದ ಶೆಟ್ಟಿ (ಗೂಗ್ಲಿ ಪೊಳಲಿ ಟೈಗರ್ಸ್‌), ಶರತ್‌ ಶೆಟ್ಟಿ (ಎಂಪೈರ್‌), ಪ್ರವೀಣ ಶೆಟ್ಟಿ (ಮೈಟ್‌ ರೈಡರ್ಸ್‌), ಉಮೇಶ ಶೆಟ್ಟಿ (ಅಭಯ ಕ್ರಿಕೆಟರ್ಸ್‌), ಸುಗ್ಗಿ ಸುಧಾರಕ ಶೆಟ್ಟಿ (ಸುಗ್ಗಿ ಸೂಪರ್‌ಸ್ಟಾರ್ಸ್‌), ಗಿರೀಶ ಹಾಗೂ ಸುಜನ್ ಶೆಟ್ಟಿ (ಎಸ್‌ಕೆಪಿ ಟೈಟನ್ಸ್ ಧಾರವಾಡ) ಹರಾಜು ವೇಳೆ ಇದ್ದರು. ಇದೇ ವೇಳೆ ಎಲ್ಲ ತಂಡಗಳ ಪೋಷಾಕು ಅನಾವರಣ ಕೂಡ ಜರುಗಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.