ADVERTISEMENT

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವಿರೋಧ: ಮುತಾಲಿಕ್ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 5:49 IST
Last Updated 10 ನವೆಂಬರ್ 2022, 5:49 IST
   

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗುರುವಾರ ಎಐಎಂಐಎಂ ಪಕ್ಷದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಖಂಡಿಸಿ, ಪ್ರತಿಭಟಿಸಲು ಮುಂದಾದ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಚನ್ನಮ್ಮ ವೃತ್ತಕ್ಕೆ ಬಂದ ಮುತಾಲಿಕ್ ಅವರು, ಆರೇಳು ಕಾರ್ಯಕರ್ತರೊಂದಿಗೆ ಮೈದಾನದತ್ತ ತೆರಳಲು ಮುಂದಾದರು. ಆಗ, ಪೊಲೀಸರು ಅವರನ್ನು ತಡೆದರು. ಕಾರ್ಯಕರ್ತರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ ಬಸ್ ಗೆ ಹತ್ತಿಸಿದರು. ಮುತಾಲಿಕ್ ಅವರನ್ನು ಕಾರು ಸಮೇತ ವಶಕ್ಕೆ ಪಡೆದು, ನಗರದ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಈ ವೇಳೆ ಕಾರ್ಯಕರ್ತರು ಟಿಪ್ಪು ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.