ADVERTISEMENT

ಎಪಿಎಂಸಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:12 IST
Last Updated 24 ಸೆಪ್ಟೆಂಬರ್ 2020, 14:12 IST

ಹುಬ್ಬಳ್ಳಿ: ಎಪಿಎಂಸಿ ಮತ್ತು ಭೂ ತಿದ್ದುಪಡಿ ಕಾಯ್ದೆಗಳು ಅನ್ನದಾತರಿಗೆ ಮಾರಕವಾಗಿದ್ದು, ಸರ್ಕಾರ ಅವುಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಬ್ಬರ್ ಟೈಯರ್‌ಗೆ ಬೆಂಕಿ ಹಚ್ಚಿ ಘೋಷಣೆ ಕೂಗಿದ ಸದಸ್ಯರು ಎಪಿಎಂಸಿ ಕಾಯ್ದೆಯಿಂದ ರೈತರ ಭವಿಷ್ಯವೇ ಡೋಲಾಯಮಾನವಾಗುತ್ತದೆ. ರೈತರು ಸಂಕಷ್ಟದಲ್ಲಿದ್ದರೆ ವ್ಯಾಪಾರಸ್ಥರು ಬೀಜ, ರಸಗೊಬ್ಬರ ನೀಡುತ್ತಿದ್ದರು. ಸಬ್ಸಿಡಿ ಮೂಲಕ ಸರ್ಕಾರವೂ ನೆರವಿಗೆ ಬರುತ್ತಿತ್ತು. ಈಗ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ನಷ್ಟವಾಗುತ್ತದೆ ಎಂದ ಆತಂಕ ವ್ಯಕ್ತಪಡಿಸಿದರು.

ಈಗಿನ ಕಾಯ್ದೆಗಳನ್ನು ಕೈ ಬಿಟ್ಟು ಸರ್ಕಾರ ಸ್ವಾಮಿನಾಥನ್‌ ವರದಿ ಜಾರಿಗೆ ತರಬೇಕು, ಗಾಂಧಿ ನಾಡು ಬದ್ಧತೆಯ ಆಧಾರದ ಮೇಲೆ ಸರ್ಕಾರ ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಮಿತಿಯ ಪ್ರಮುಖರಾದ ಸಿದ್ದು ತೇಜಿ, ರಮೇಶ ಭೋಸ್ಲೆ, ಮಂಜುನಾಥ ಅಂತರಗಂಗಾ, ಬಾಬಾಜಾನ್‌ ಮುಧೋಳ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಮುಸ್ತಾಕ ಕರ್ಜಗಿ, ಚಂದ್ರಶೇಖರ ಬೆಟಗೇರಿ, ಆಂಜನೇಯ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.