ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಉತ್ತರ ಕರ್ನಾಟಕ ದಿ. ಎ.ಕೆ. ಮುಧೋಳ ಅಭಿಮಾನಿಗಳ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ (ಎಐಟಿಯುಸಿ) ಹಾಗೂ ರಾಷ್ಟ್ರೀಯ ಆಹಿಂದ ಸಂಘಟನೆ, ರಾಷ್ಟ್ರೀಯ ಮಹಿಳಾ ಸಂಘಟನೆ ಸದಸ್ಯರು ಮಂಗಳವರ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಅಹಿಂದ ಪ್ರಚಾರ ಸಮಿತಿ ಅಧ್ಯಕ್ಷ ಬಾಬಾಜಾನ ಮುಧೋಳ ಮಾತನಾಡಿ, ‘ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಜಮೀನನ್ನು ದೇಶದ ಉದ್ಯಮಿಗಳಿಗೆ ಕೊಡಲು ಹುನ್ನಾರ ನಡೆಸಿದೆ. ಇದನ್ನು ನಾವು ಸಹಿಸುವುದಿಲ್ಲ. ಇದು ನಮ್ಮ ಹಕ್ಕು. ಕೇಂದ್ರ ಸರ್ಕಾರವು ಕಾನೂನು ಜಾರಿಗೊಳಿಸಿದ್ದಲ್ಲಿ, ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ’ ಎಂದರು.
ಮುಖಂಡರಾದ ಮುತ್ತಣ್ಣ ಶಿವಳ್ಳಿ, ಪೀರಸಾಬ ನಧಾಫ, ಬಿ.ಎ. ಮುಧೋಳ, ಅಬ್ದಲ್ ಖಾದರ ಬೇಟಗೇರಿ, ಮೊಕ್ತಿಯಾರ ಮನಿಯಾರ, ಕರೀಮ ಲಕ್ಕುಂಡಿ, ಯೂಸೂಫ ಬಳ್ಳಾರಿ, ಶಮ್‌ಸೀದ ಗಾಂಜೇವಾಲೆ, ಇಮ್ತಿಯಾಜ ಬಿಳೆಪಸಾರ, ಝಾಕೀರ ಪಠಾಣ, ಇಕ್ಬಾಲ ಚಿತ್ತೆವಾಲೆ, ನಗಿನಾ ಮುಲ್ಲಾ, ಶಹಿನಾಜ ಅಮರಗೋಳ, ರಮೇಶ ಭೊಸ್ಲೆ, ಶಾಜಿದ ಹಾಲಭಾವಿ, ಫಾತಿಮಾ ತಡಕೋಡ, ರೆಹಮಾನಸಾಬ ಮಕಾನದಾರ, ಆಸೀಶ ಜುಂಗೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.