ಧಾರವಾಡ ತಾಲ್ಲೂಕಿನ ಬಣದೂರು ಸಮೀಪದ ಕಬ್ಬಿನ ಗದ್ದೆಯಲ್ಲಿದ್ದ ಹೆಬ್ಬಾವು
ಧಾರವಾಡ: ತಾಲ್ಲೂಕಿನ ಬಣದೂರು ಸಮೀಪ (ಹಳಿಯಾಳ ಮಾರ್ಗ) ಕಬ್ಬಿನ ಗದ್ದೆಯಲ್ಲಿದ್ದ ದೊಡ್ಡ ಹೆಬ್ಬಾವೊಂದನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಹಾವು ನೋಡಿ ಗದ್ದೆಯ ಮಾಲೀಕ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಮತ್ತು ಉರಗ ಪ್ರೇಮಿ ಸೋಮಶೇಖರ್ ಕಾರ್ಯಾಚರಣೆ ನಡೆಸಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
‘ಹೆಬ್ಬಾವು ಅರಣ್ಯದಿಂದ ಗದ್ದೆಗೆ ಕಡೆಗೆ ಬಂದಿದೆ. ಸುಮಾರು 30 ಕೆ.ಜಿ, 12 ಅಡಿ ಉದ್ದ ಇತ್ತು. ಅದನ್ನು ಚೀಲದಲ್ಲಿ ತುಂಬಿಕೊಂಡು ಕಾಡಿಗೆ ಬಿಡಲಾಯಿತು’ ಎಂದು ಡಿಆರ್‌ಎಫ್‌ಒ ಯೂಸುಫ್ ಪೆಂಡಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.