ADVERTISEMENT

ಹುಬ್ಬಳ್ಳಿ: 56 ವಟುಗಳಿಗೆ ಸಾಮೂಹಿಕ ಉಪನಯನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:49 IST
Last Updated 27 ಜನವರಿ 2023, 5:49 IST
ರಜಪೂತ ಸಮಾಜದಿಂದ ಹುಬ್ಬಳ್ಳಿಯ ಅರವಿಂದ ನಗರದಲ್ಲಿ ಗುರುವಾರ ಜರುಗಿದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜಗೀಶ ಶೆಟ್ಟರ್ ಅವರು, ವಟುಗಳಿಗೆ ಶುಭ ಕೋರಿದರು
ರಜಪೂತ ಸಮಾಜದಿಂದ ಹುಬ್ಬಳ್ಳಿಯ ಅರವಿಂದ ನಗರದಲ್ಲಿ ಗುರುವಾರ ಜರುಗಿದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜಗೀಶ ಶೆಟ್ಟರ್ ಅವರು, ವಟುಗಳಿಗೆ ಶುಭ ಕೋರಿದರು   

ಹುಬ್ಬಳ್ಳಿ: ನಗರದ ರಜಪೂತ ಸಮಾಜದಿಂದ ಅರವಿಂದ ನಗರದಲ್ಲಿ ಗುರುವಾರ ಜರುಗಿದ ಸಾಮೂಹಿಕ ಉಪನಯಕ ಕಾರ್ಯಕ್ರಮದಲ್ಲಿ 56 ವಟುಗಳಿಗೆ ಸಾಮೂಹಿಕ ಉಪನಯನ ನೆರವೇರಿತು.

ಕಾರ್ಯಕ್ರಮದಲ್ಲಿ ವಟುಗಳಿಗೆ ಶುಭ ಕೋರಿ ಮಾತನಾಡಿದ ಶಾಸಕ ಜಗದೀಶ ಶೆಟ್ಟರ್, ‘ರಜಪೂತ ಸಮುದಾಯವು ಚಿಕ್ಕದಾದರೂ ಅತ್ಯಂತ ಒಗ್ಗಟ್ಟಿನಿಂದ ಇದೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಂಸ್ಕಾರ ನೀಡುವಂತಹ ಸಾಮೂಹಿಕ ಉಪನಯನ ಸೇರಿದಂತೆ, ಸಮುದಾಯದ ಪ್ರಗತಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಸಮುದಾಯದ ಕಲ್ಯಾಣ ಮಂಪಟ ಮತ್ತು ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹2 ಕೋಟಿ ಅನುದಾನ ಮಂಜೂರು ಮಾಡಿಸುವಂತೆ, ಸಮುದಾಯದ ಮುಖಂಡರು ಶೆಟ್ಟರ್ ಅವರಿಗೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ‘ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಸಮುದಾಯದ ಮುಖಂಡರಾದ ಸುಭಾಸಸಿಂಗ ಜಮಾದಾರ, ವಿದ್ಯಾ ಜಾವೂರ, ಶೋಭಾ ಕಿಲ್ಲೇದಾರ, ಉಮೇಶ್ ಸಿಂಗ ಅಂಗಡಿ, ಪ್ರತಾಪ್ ಹಜೇರಿ, ಎಂ.ಆರ್. ರಜಪೂತ, ರಜತ ಹಜೇರಿ, ಶಿವರಾಜಸಿಂಗ ಜಮಾದಾರ, ರೂಪಾ ಜಮಾದಾರ, ಶ್ರೀನಿವಾಸಸಿಂಗ ರಜಪೂತ, ಬಲದೇವಸಿಂಗ ಠಾಕೂರ, ಅನಂತ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.