ADVERTISEMENT

ಧಾರವಾಡ: ಫೆ.12ಕ್ಕೆ 80 ದೇವಾಲಯಗಳಿಗೆ ರುದ್ರಾಕ್ಷಿ ವಿತರಣೆ

ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:34 IST
Last Updated 9 ಫೆಬ್ರುವರಿ 2023, 6:34 IST

ಧಾರವಾಡ: ‘ಸಮೃದ್ಧಿಯ ಸಂಕೇತವಾದ ರುದ್ರಾಕ್ಷಿಯ ಭಕ್ತಿಯ ಬುತ್ತಿಯನ್ನು ಫೆ.12ರಂದು ಜಿಲ್ಲೆಯ 80ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿತರಿಸಲಾಗುವುದು’ ಎಂದು ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಅಂದು ಶಿವಭಕ್ತರಿಗೆ ಲಕ್ಷ ರುದ್ರಾಕ್ಷಿ ಉಚಿತವಾಗಿ ವಿತರಿಸಲಾಗುವುದು. ಬೆಳಿಗ್ಗೆ 9.30ಕ್ಕೆ ನಗರದ ಸೋಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ರುದ್ರಾಕ್ಷಿ ವಿತರಣೆ ನಡೆಯಲಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮನಿ ಶಿವಾಚಾರ್ಯ ಸ್ವಾಮೀಜಿ, ವಿವಿಧ ದೇವಾಲಯಗಳಲ್ಲಿ ಮುಖ್ಯಸ್ಥರು, ಅರ್ಚಕರನ್ನು ಆಶೀರ್ವದಿಸಿ ರುದ್ರಾಕ್ಷಿ ನೀಡಲಿದ್ದಾರೆ’ ಎಂದರು.

ADVERTISEMENT

‘ಧಾರ್ಮಿಕ ಜಾಗೃತಿಗಾಗಿ ಮತ್ತು ನಾಡಿನ ಸಂಸ್ಕೃತಿ, ಸಂಸ್ಕಾರಗಳ ಸಂರಕ್ಷಣೆಗಾಗಿ ವಿಭಿನ್ನವಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಈ ಅಭಿಯಾನ ಹಮ್ಮಿಕೊಂಡಿದೆ. ಕಾಶಿ ಮತ್ತು ನೇಪಾಳದಿಂದ ರುದ್ರಾಕ್ಷಿಗಳನ್ನು ತರಿಸಲಾಗಿದೆ. ಕುಂದಗೋಳ, ಹುಬ್ಬಳ್ಳಿ, ಧಾರವಾಡದಲ್ಲಿನ ವಿವಿಧ ಮಹಿಳಾ ಮಂಡಳ ಸದಸ್ಯರು, ಸ್ತ್ರಿ ಶಕ್ತಿ ಸಂಘಗಳ ಸದಸ್ಯರು ರುದ್ರಾಕ್ಷಿಗೆ ಶಿವದಾರ ಪೋಣಿಸುವ ಸೇವೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಸಂಶಿ, ಶಿರೂರ ಮತ್ತು ಕುಂದಗೋಳದಲ್ಲಿ ಮುಸ್ಲಿಂ ಮಹಿಳೆಯರು ಭಕ್ತಿಯಿಂದ ರುದ್ರಾಕ್ಷಿ ಜೋಡಿಸಿದ್ದು, ಅವರ ಸೌಹಾರ್ದತೆ, ಭಾವೈಕ್ಯತೆ ಎತ್ತಿ ತೋರಿಸುತ್ತದೆ’ ಎಂದು ಸ್ವಾಮೀಜಿ ಹೇಳಿದರು.

ಬಸವರಾಜ ಕಡಕೋಳ, ಬಸವರಾಜ ಕೌಜಲಗಿ, ಸಿ.ಎಸ್.ಪಾಟೀಲ, ಜಿ.ಆರ್.ಹಿರೇಮಠ, ಡಾ. ಎಸ್.ಜಿ. ಮಠದ, ರುದ್ರಯ್ಯ ಹೊಸಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.