ADVERTISEMENT

ಲೊಕೊ ಪೈಲಟ್‌ಗಳಿಗೆ ‘ರನ್ನಿಂಗ್‌ ರೂಮ್‌’

ನೈರುತ್ಯ ರೈಲ್ವೆಯ ವಿವಿಧ ವಿಭಾಗಗಳಲ್ಲಿ 22 ರನ್ನಿಂಗ್ ರೂಮ್‌ಗಳ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 23:04 IST
Last Updated 20 ಏಪ್ರಿಲ್ 2025, 23:04 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ಲೋಕೊ ಪೈಲಟ್‌ಗಳು, ಸಹ ಲೋಕೊ ಪೈಲಟ್‌ಗಳು ಹಾಗೂ ರೈಲ್ವೆ ವ್ಯವಸ್ಥಾಪಕರಿಗೆ ಅವರ ವಿಶ್ರಾಂತಿ ಅವಧಿಯಲ್ಲಿ ವಾಸ್ತವ್ಯಕ್ಕೆ ರನ್ನಿಂಗ್ ರೂಮ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಟಿ.ವಿ. ವಿಷ್ಣುಭೂಷಣ ಹೇಳಿದರು.

ADVERTISEMENT

‘ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ 9, ಬೆಂಗಳೂರು ವಿಭಾಗದಲ್ಲಿ 4, ಮೈಸೂರು ವಿಭಾಗದಲ್ಲಿ 9 ಸೇರಿದಂತೆ ಒಟ್ಟು 22 ರನ್ನಿಂಗ್ ರೂಮ್‌ಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಹುಬ್ಬಳ್ಳಿ ವಿಭಾಗದ 9 ರನ್ನಿಂಗ್ ರೂಮ್‌ಗಳಲ್ಲಿ, 431 ಹಾಸಿಗೆ ಸೌಲಭ್ಯ ಇದೆ. ಹುಬ್ಬಳ್ಳಿ ರೈಲು ನಿಲ್ದಾಣದ ಬಳಿ 36 ಕೊಠಡಿ ಇರುವ ರನ್ನಿಂಗ್ ರೂಮ್ ಇದ್ದು, ಇಲ್ಲಿ 72 ಹಾಸಿಗೆ ಸೌಲಭ್ಯ, ಅತ್ಯಾಧುನಿಕ ಮತ್ತು ಹವಾನಿಯಂತ್ರಿತ ವ್ಯವಸ್ಥೆ ಇದೆ’ ಎಂದು ತಿಳಿಸಿದರು. ಎಂದರು.

‘ರನ್ನಿಂಗ್ ರೂಮ್‌ನಲ್ಲಿ ಧ್ಯಾನ, ಯೋಗಾಸನ ಹಾಗೂ ಒಳಾಂಗಣ ಕ್ರೀಡೆಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯ ನಿರ್ಮಿಸಲಾಗಿದೆ. ಸುರಕ್ಷತೆಗಾಗಿ ಎಲ್ಲೆಡೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ಕೊಠಡಿಯಲ್ಲಿ ಎರಡು ಬೆಡ್, ಶೌಚಾಲಯ, ಕುಡಿಯುವ ನೀರು, ಸ್ವಚ್ಛ ಹೊದಿಕೆ, ಸೊಳ್ಳೆ ಪರದೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಲೋಕೊ ಪೈಲಟ್‌ಗಳಿಗೆ ಕೇವಲ ₹5ಕ್ಕೆ ಊಟ, ಉಪಾಹಾರ ಒದಗಿಸಲಾಗುತ್ತಿದೆ. ಒಂದು ಬಾರಿ ಊಟಕ್ಕೆ ₹65 ವೆಚ್ಚವಾಗಲಿದ್ದು, ಅದರಲ್ಲಿ ₹60 ಅನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ತಿಳಿಸಿದರು.

ಬೇರೆ ಕಡೆಯಿಂದ ಗೂಡ್ಸ್, ಪ್ಯಾಸೆಂಜರ್ ರೈಲುಗಳ ಲೋಕೊ ಪೈಲಟ್, ಸಹ ಲೋಕೊಪೈಲಟ್‌ಗಳು ಹಾಗೂ ವ್ಯವಸ್ಥಾಪಕರು ಮಾತ್ರ ರನ್ನಿಂಗ್ ರೂಮ್‌ ಬಳಸಬಹುದಾಗಿದೆ.  ಒಬ್ಬ ಲೋಕೊ ಪೈಲಟ್ ಗರಿಷ್ಠ ಎಂಟು ಗಂಟೆ ಇಲ್ಲಿ ವಿಶ್ರಾಂತಿ ಪಡೆಯಬಹುದು. ಪ್ರತಿ ದಿನ 50ಕ್ಕೂ ಹೆಚ್ಚು ಸಿಬ್ಬಂದಿ ಈ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

‘ರನ್ನಿಂಗ್ ರೂಮ್‌ಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಗುಣಮಟ್ಟದ ಊಟ, ಉಪಾಹಾರ ಒದಗಿಸಲಾಗುತ್ತಿದೆ’ ಎಂದು ಲೋಕೊ ಪೈಲಟ್ ಶ್ಯಾಮಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.