ಹುಬ್ಬಳ್ಳಿ: ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ಈಚೆಗೆ ಮುಕ್ತಾಯವಾದ ರಾಜ್ಯಮಟ್ಟದ 13ನೇ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿ ಸ್ಪರ್ಧಿಗಳು 14 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
10 ಮೀಟರ್, 25 ಮೀಟರ್, 50 ಮೀಟರ್, ರೈಫಲ್, ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಅಕಾಡೆಮಿಯ ಸ್ಪರ್ಧಿಗಳು ನಾಲ್ಕು ಚಿನ್ನ, ಎಂಟು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ಶೂಟರ್‌ಗಳು ಭಾಗವಹಿಸಿದ್ದರು.
ಪದಕ ವಿಜೇತರು (ವೈಯಕ್ತಿಕ ವಿಭಾಗ): 10 ಮೀ. ಏರ್ ರೈಫಲ್ ಎನ್ಆರ್ ಮಾಸ್ಟರ್ ವಿಭಾಗದಲ್ಲಿ ರಮೇಶ ದೊಡ್ಡಮನಿ ಚಿನ್ನ, 10 ಮೀ. ಏರ್ ಪಿಸ್ತೂಲ್ ಎನ್ಆರ್ ಕಿವುಡರ ವಿಭಾಗದಲ್ಲಿ ಮೊಹಮ್ಮದ ಹುಸೇನ ನಾಯಕ್ ಚಿನ್ನದ ಪದಕ ಪಡೆದಿದ್ದಾರೆ.
50 ಮೀ. ಫ್ರೀ ಪಿಸ್ತೂಲ್ ಹಾಗೂ 10 ಮೀ. ಏರ್ ಪಿಸ್ತೂಲ್ ಐಎಸ್ಎಸ್ಎಫ್ ವಿಭಾಗದಲ್ಲಿ ಸಿದ್ದಾರ್ಥ್ ದೇವಟೆ ಬೆಳ್ಳಿ, 25 ಮೀ. ಸ್ಟ್ಯಾಂಡರ್ಡ್ ಪಿಸ್ತೂಲ್ ಎನ್ಆರ್ ವಿಭಾಗದಲ್ಲಿ ರವಿಚಂದ್ರ ಬಾಲೆಹೊಸೂರ ಬೆಳ್ಳಿ, 50 ಮೀ. ಫ್ರೀ ಪಿಸ್ತೂಲ್ ಐಎಸ್ಎಸ್ಎಫ್‌ನಲ್ಲಿ ಐಶ್ವರ್ಯ ಬಾಲೆಹೊಸೂರ ಬೆಳ್ಳಿ, 50 ಮೀ. ಫ್ರೀ ಪಿಸ್ತೂಲ್ ಎನ್ಆರ್ ಮಾಸ್ಟರ್‌ನಲ್ಲಿ ಜಯಶ್ರೀ ಪಾಟೀಲ ಬೆಳ್ಳಿ, 25 ಮೀ. ಸೆಂಟರ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ ಮೊಹಮ್ಮದ ಅಜ್ಮಲ್ ಬೆಳ್ಳಿ ಪದಕ ಗಳಿಸಿದ್ದಾರೆ.
10 ಮೀ. ಏರ್ ರೈಫಲ್ ಐಎಸ್ಎಸ್ಎಫ್ ಜ್ಯೂನಿಯರ್ ಹಾಗೂ ಯೂಥ್ ವಿಭಾಗದಲ್ಲಿ ಶ್ರೀಕರ ಸಬನಿಸ ಕಂಚಿನ ಪದಕ ಪಡೆದಿದ್ದಾರೆ.
ತಂಡ ವಿಭಾಗ: ಹರ್ಷ ಭದ್ರಾಪುರ್, ಆದರ್ಶ ನಿಕಂ, ಶ್ರೀಕರ ಸಬನಿಸ್ ಅವರ ತಂಡ 10 ಮೀಟರ್ ಏರ್ ರೈಫಲ‌್ ಐಎಸ್ಎಸ್ಎಫ್‌ನ ಜೂನಿಯರ್ ಹಾಗೂ ಯೂಥ್ ವಿಭಾಗದಲ್ಲಿ ಚಿನ್ನ, ಸೀನಿಯರ್ ವಿಭಾಗದಲ್ಲಿ ಬೆಳ್ಳಿಯ ಪದಕ ಗಿಟ್ಟಿಸಿದ್ದಾರೆ.
ವೇದಾವತಿ, ಗೌರಿ ಕೊಚ್ಚಲಾಪುರಮಠ, ಮಿಂಜಿರಿ ಅವರ ತಂಡವು 10 ಮೀ. ಏರ್ ಪಿಸ್ತೂಲ್ ಎನ್‌ಆರ್ ಯೂಥ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ಪದಕ ಪಡೆದವರು ಮತ್ತು ಅಂಕಗಳ ಆಧಾರದ ಕನಿಷ್ಠ 50 ಶೂಟರ್‌ಗಳು ದಕ್ಷಿಣ ವಲಯ, ಜಿ.ವಿ.ಮಾವಲಂಕರ ಮತ್ತು ಆಲ್ ಇಂಡಿಯಾ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.
ಸ್ಪರ್ಧಿಗಳಿಗೆ ರಾಷ್ಟ್ರಮಟ್ಟದ ಶೂಟರ್, ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರ ತರಬೇತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.