ADVERTISEMENT

ಕಿರುಚಿತ್ರ ಸ್ಪರ್ಧೆ: ಬ್ರೈಟ್ ಬಿಜಿನೆಸ್ ಸ್ಕೂಲ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 18 ಮೇ 2025, 16:21 IST
Last Updated 18 ಮೇ 2025, 16:21 IST
ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹುಬ್ಬಳ್ಳಿಯ ಬ್ರೈಟ್ ಬಿಜಿನೆಸ್ ಸ್ಕೂಲ್ ವಿದ್ಯಾರ್ಥಿಗಳು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು
ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹುಬ್ಬಳ್ಳಿಯ ಬ್ರೈಟ್ ಬಿಜಿನೆಸ್ ಸ್ಕೂಲ್ ವಿದ್ಯಾರ್ಥಿಗಳು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು   

ಹುಬ್ಬಳ್ಳಿ: ಇಲ್ಲಿನ ಜೆ.ಜಿ. ಕಾಮರ್ಸ್ ಕಾಲೇಜು ಸಂಘಟಿಸಿದ್ದ ‘ಆ್ಯಕ್ಷನ್ ಕಟ್’ ಕಿರುಚಿತ್ರ ಸ್ಪರ್ಧೆಯಲ್ಲಿ ಬ್ರೈಟ್ ಬಿಜಿನೆಸ್ ಸ್ಕೂಲ್ ವಿದ್ಯಾರ್ಥಿಗಳು ನಿರ್ಮಿಸಿದ ಪೋಷಕರ ಬದುಕಿನ (ಪೇರೆಂಟ್ಸ್ ಲೈಫ್) ಕಥಾವಸ್ತು ಆಧರಿಸಿದ ಕಿರುಚಿತ್ರ ಪ್ರಥಮ ಬಹುಮಾನ ಗಳಿಸಿದೆ.

ಕಿರುಚಿತ್ರದ ನಿರ್ದೇಶಕ ರಾಹುಲ್ ಮೇತ್ರಿ ಅವರು ‘ಉತ್ತಮ ನಿರ್ದೇಶಕ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರಾಹುಲ್ ಮೇತ್ರಿ, ಓಂಕಾರ ಅಲಬೂರ, ಸೌರಭ ಸಂಗೂರಮಠ, ಅರ್ಜುನ್ ಅಂಗಡಿ, ಪಂಕಜ್ ಕುಮಾರ್ ಮ್ಯಾಗೇರಿ, ಗಂಗಾಧರ ಕಾಮತ್, ಸಾಕ್ಷಿ ಮಿರಜಕರ ಹಾಗೂ ರಕ್ಷಿತಾ ಆಕಳವಾಡಿ ಚಿತ್ರದಲ್ಲಿ ನಟಿಸಿದ್ದಾರೆ.

ADVERTISEMENT

15ಕ್ಕೂ ಅಧಿಕ ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.