ADVERTISEMENT

ಧಾರವಾಡ | ತಾಯಿ ಕೊಲೆ ಮಾಡಿದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 4:40 IST
Last Updated 8 ಸೆಪ್ಟೆಂಬರ್ 2023, 4:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಧಾರವಾಡ: ವೃದ್ಧ ತಾಯಿಯನ್ನು ಕೊಲೆ ಮಾಡಿ ತಂದೆ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಅಣ್ಣಿಗೇರಿ ತಾಲ್ಲೂಕು ಬೆನ್ನೂರಿನ ಬಸವರಾಜ ಕಲ್ಲಪ್ಪ ಅಣ್ಣಿಗೇರಿಗೆ ಜೀವಾವಧಿ ಶಿಕ್ಷೆಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ವಿಧಿಸಿದೆ.

ನ್ಯಾಯಾಧೀಶ ಎನ್‌.ಸುಬ್ರಮಣ್ಯ ಆದೇಶ ನೀಡಿದ್ದಾರೆ.

ADVERTISEMENT

ಏನಿದು ಪ್ರಕರಣ: 2022ರ ಮೇ 1ರಂದು ಬಸವರಾಜ, ತಾಯಿಯನ್ನು ಕೊಲೆ ಮಾಡಿದ್ದ ಪ್ರಕರಣ ನಡೆದಿತ್ತು. ಕುಟುಂಬದ ಎಲ್ಲ ಆಸ್ತಿ ತನ್ನ ಹೆಸರಿಗೆ ಮಾಡಿಕೊಡುವಂತೆ ಬಸವರಾಜ ತಂದೆ–ತಾಯಿ ಜೊತೆ ಜಗಳವಾಡಿ ಅವರಿಗೆ ಥಳಿಸಿದ್ದ. ಗ್ರಾಮದ ಹಿರಿಯರು ಬುದ್ಧಿವಾದ ಹೇಳಿ ಎರಡೂವರೆ ಎಕರೆ ಜಮೀನನ್ನು ಅವನ ಪಾಲಿಗೆ ಭಾಗ ಮಾಡಿಕೊಟ್ಟಿದ್ದರು. ಬಾಕಿ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಹಠ ಹಿಡಿದು ಪದೇಪದೇ ಹೆತ್ತವರ ಜೊತೆ ಜಗಳ ಮುಂದುವರೆಸಿದ್ದ.

2022ರ ಮೇ 1ರಂದು ಅವನು ತಂದೆಗೆ ಹೊಡೆಯುವಾಗ ತಾಯಿ ಬಿಡಿಸಲು ಮುಂದಾಗಿದ್ದಾರೆ. ಆಗ ತಾಯಿಗೆ ಹೊಡೆದು ಕೊಲೆ ಮಾಡಿದ್ದ. ಬಸವರಾಜ ತಂದೆ ಅಣ್ಣಿಗೇರಿ ಠಾಣೆಯಲ್ಲಿ ದೂರು ನೀಡಿದ್ದರು. ಇನ್‌ಸ್ಪೆಕ್ಟರ್‌ ಸಿ.ಜಿ. ಮಠಪತಿ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಶಾಂತ್‌ ಎಸ್‌. ತೋರಗಲ್‌ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.