ADVERTISEMENT

ಪ್ರೇಮಿಗಳ ಆತ್ಮಹತ್ಯೆ: ಅಣ್ಣ–ತಂಗಿ ಸಂಬಂಧ?

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 3:51 IST
Last Updated 10 ಡಿಸೆಂಬರ್ 2022, 3:51 IST

ನವಲಗುಂದ: ಪಟ್ಟಣದ ಬಸ್ ನಿಲ್ದಾಣ ಸಮೀಪ ವಸತಿಗೃಹದಲ್ಲಿ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು ಸಂಬಂಧದಲ್ಲಿ ಅಣ್ಣ–ತಂಗಿಯಾಗಿದ್ದರು ಎನ್ನಲಾಗಿದೆ.

ಬೆಳವಟಗಿ ಗ್ರಾಮದ ಯುವಕ ಬಸವರಾಜ ತಳವಾರ(22) ಹಾಗೂ ಧಾರವಾಡ ತಾಲ್ಲೂಕಿನ ಗರಗ ಹತ್ತಿರದ ನಿರಲಕಟ್ಟಿ ಯುವತಿ ದೀಪಾ ನೀಲವ್ವ ಎತ್ತಿನಗುಡ್ಡ(19) ಪ್ರೇಮಿಗಳಿಬ್ಬರ ತಾಯಂದಿರು ಅಕ್ಕ–ತಂಗಿಯರಾಗಿದ್ದು, ರಕ್ತ ಸಂಬಂಧಿಗಳಾಗಿದ್ದಾರೆ.

ಯುವತಿ ಧಾರವಾಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವಕ ಏಳನೇ ತರಗತಿ ತೇರ್ಗಡೆ
ಯಾಗಿದ್ದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಪ್ರೀತಿಸುವುದು ಕುಟುಂಬಸ್ಥರಿಗೆ ಗೊತ್ತಾದ ಬಳಿಕ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಇಬ್ಬರಿಗೂ ತಪ್ಪಿನ ಅರಿವಾಗಿ, ಮಾನಸಿಕವಾಗಿ ಕುಗ್ಗಿ ಮನೆ ಬಿಟ್ಟು ಬಂದಿದ್ದರು
ಎನ್ನಲಾಗಿದೆ.

ADVERTISEMENT

ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿ ಮರಳಿ ಮನೆಗೆ ಬಂದಿರಲಿಲ್ಲ. ನಂತರ ಇಬ್ಬರೂ ನವಲಗುಂದ ಪಟ್ಟಣದ ವಸತಿ ಗೃಹದಲ್ಲಿ ಎರಡ್ಮೂರು ದಿನ ಇದ್ದು, ಡಿ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ನವಲಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.