ADVERTISEMENT

ಹುಬ್ಬಳ್ಳಿ | ತೇಜಸ್ವಿ ಹೇಳಿಕೆ: ಕ್ಷಮೆಗೆ ಶಿಕ್ಷಕರ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 21:12 IST
Last Updated 31 ಜುಲೈ 2020, 21:12 IST

ಹುಬ್ಬಳ್ಳಿ: ‘ಶಿಕ್ಷಕರಿಂದಲೇ ದೇಶದ ಶಿಕ್ಷಣ ವ್ಯವಸ್ಥೆಯು ಹಾಳಾಗಿದೆ’ ಎಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಡಾ.ತೇಜಸ್ವಿ ವಿ.ಕಟ್ಟೀಮನಿ ಅವರ ಹೇಳಿಕೆಯನ್ನು ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಒಕ್ಕೂಟ ಖಂಡಿಸಿದ್ದು, ಶಿಕ್ಷಕರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.

‘ಶಿಕ್ಷಣ ನೀತಿ ರೂಪಿಸಿದ ಕೆಲವು ನಿರೂಪಕರು, ಕೆಳಹಂತದ ಮತ್ತು ವಾಸ್ತವಿಕ ಸ್ಥಿತಿ ಅರಿವಿಲ್ಲದ ಉನ್ನತ ಹಂತದಲ್ಲಿರುವ ಕೆಲವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇಂಥ ಹೇಳಿಕೆಯ ಮೂಲಕ ಕಟ್ಟೀಮನಿಯವರು ಕೆಲ ರಾಜಕಾರಣಿಗಳು, ಸರ್ಕಾರದ ವಿಶ್ವಾಸಗಳಿಸಲು ಪ್ರಯತ್ನಿಸುತ್ತಿರುವಂತಿದೆ' ಎಂದು ಒಕ್ಕೂಟದ ಉಪಾಧ್ಯಕ್ಷ ಬಸವರಾಜ ಗುರಿಕಾರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT