ADVERTISEMENT

ಮುಂಬೈನಿಂದ ಬಂದ ಮೊದಲ ಇಂಡಿಗೊ ವಿಮಾನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 14:36 IST
Last Updated 19 ಸೆಪ್ಟೆಂಬರ್ 2020, 14:36 IST
ಮುಂಬೈನಿಂದ ಹುಬ್ಬಳ್ಳಿಗೆ ಶುಕ್ರವಾರ ಬಂದ ಇಂಡಿಗೊ ವಿಮಾನಕ್ಕೆ ‘ವಾಟರ್‌ ಸೆಲ್ಯೂಟ್‌’ ಗೌರವ ನೀಡಲಾಯಿತು
ಮುಂಬೈನಿಂದ ಹುಬ್ಬಳ್ಳಿಗೆ ಶುಕ್ರವಾರ ಬಂದ ಇಂಡಿಗೊ ವಿಮಾನಕ್ಕೆ ‘ವಾಟರ್‌ ಸೆಲ್ಯೂಟ್‌’ ಗೌರವ ನೀಡಲಾಯಿತು   

ಹುಬ್ಬಳ್ಳಿ: ಇಂಡಿಗೊ ಸಂಸ್ಥೆ ಮೊದಲ ಬಾರಿಗೆ ಮುಂಬೈ–ಹುಬ್ಬಳ್ಳಿ ನಡುವೆ ನೇರ ವಿಮಾನ ಸೌಲಭ್ಯ ಆರಂಭಿಸಿದ್ದು, ಶುಕ್ರವಾರ ಈ ವಿಮಾನ ಇಲ್ಲಿಗೆ ಬಂದಿತು.

ಈ ಸಂಸ್ಥೆ ಈಗಾಗಲೇ ಅಹಮದಾಬಾದ್‌, ಕಣ್ಣೂರು, ಚೆನ್ನೈ, ಕೊಚ್ಚಿ ಮತ್ತು ಬೆಂಗಳೂರು ನಗರಗಳಿಗೆ ವಿಮಾನ ಸೌಲಭ್ಯ ಹೊಂದಿದ್ದು, ಮುಂಬೈಗೆ ಮೊದಲ ಬಾರಿಗೆ ನೇರ ವಿಮಾನ ಆರಂಭಿಸಿದೆ. ಇಲ್ಲಿಗೆ ಬಂದ ವಿಮಾನಕ್ಕೆ ‘ವಾಟರ್‌ ಸೆಲ್ಯೂಟ್‌’ ಗೌರವ ನೀಡಲಾಯಿತು.

ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ 6.35ಕ್ಕೆ ಮುಂಬೈನಿಂದ ಹೊರಡುವ ವಿಮಾನ 8 ಗಂಟೆಗೆ ಹುಬ್ಬಳ್ಳಿ ತಲುಪಲಿದ್ದು, ಇಲ್ಲಿಂದ 8.40ಕ್ಕೆ ಹೊರಟು 10.05ಕ್ಕೆ ಮುಂಬೈ ತಲುಪಲಿದೆ. ಮುಂಬೈನಿಂದ ಬಂದ ವಿಮಾನದಲ್ಲಿ 57 ಮತ್ತು ಹುಬ್ಬಳ್ಳಿಯಿಂದ ಮುಂಬೈಗೆ ತೆರಳಿದ ವಿಮಾನದಲ್ಲಿ 63 ಪ್ರಯಾಣಿಕರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.