ADVERTISEMENT

ರಸ್ತೆ ಬದಿ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 15:31 IST
Last Updated 28 ಸೆಪ್ಟೆಂಬರ್ 2022, 15:31 IST
ಹುಬ್ಬಳ್ಳಿಯ ಆನಂದ ನಗರದ ಸಂಗಮ ಕಾಲೊನಿಯ ರಸ್ತೆ ಬದಿ ಸಂಗ್ರಹವಾಗಿರುವ ಕಸ
ಹುಬ್ಬಳ್ಳಿಯ ಆನಂದ ನಗರದ ಸಂಗಮ ಕಾಲೊನಿಯ ರಸ್ತೆ ಬದಿ ಸಂಗ್ರಹವಾಗಿರುವ ಕಸ   

ಚರಂಡಿ ನಿರ್ಮಿಸಿ, ಸ್ವಚ್ಛತೆ ಕಾಪಾಡಿ

ಹುಬ್ಬಳ್ಳಿ: ಇಲ್ಲಿನ ಆನಂದ ನಗರದ ಸಂಗಮ ಕಾಲೊನಿಯ ರಸ್ತೆ ಬದಿ ಕಸ ಎಸೆಯಲಾಗಿದ್ದು, ಹಲವು ದಿನಗಳಿಂದ ವಿಲೇವಾರಿ ಮಾಡಿಲ್ಲ. ಇದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

ರಸ್ತೆ ಬದಿ ಚರಂಡಿ ನಿರ್ಮಿಸಿಲ್ಲ. ಮಳೆ ಬಂದರೆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಈ ಸ್ಥಳವು ಹಂದಿ, ನಾಯಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಈ ಬಗ್ಗೆ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಸ್ಪಂದಿಸಿಲ್ಲ. ಅಧಿಕಾರಿಗಳು ಗಮನ ಹರಿಸಿ ಶೀಘ್ರ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಚರಂಡಿ ನಿರ್ಮಿಸಬೇಕು.

ADVERTISEMENT

– ಶ್ರೀನಿವಾಸ ರಾಯಬಾಗಿ,ಅಧ್ಯಕ್ಷ, ಸಂಗಮ ಕಾಲೊನಿ ನಿವಾಸಿಗಳ ಸಂಘ

ರಸ್ತೆ ಬದಿ ಕಸದ ರಾಶಿ

ಹುಬ್ಬಳ್ಳಿ: ನಗರದ ಲೋಕಪ್ಪನ ಹಕ್ಕಲದಿಂದ ವಿಶ್ವೇಶ್ವರ ನಗರಕ್ಕೆ ಹೋಗುವ ರೈಲ್ವೆ ಕೆಳಸೇತುವೆಯ ರಸ್ತೆ ಬದಿಯ ಖಾಲಿ ನಿವೇಶನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಕಸದ ರಾಶಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್, ಮನೆ ಕಸ, ಹೋಟೆಲ್ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸವನ್ನು ಕೆಲವರು ಇಲ್ಲಿಗೆ ತಂದು ಹಾಕುತ್ತಿದ್ದಾರೆ.

ಮಹಾನಗರ ಪಾಲಿಕೆಯವರು ಸಹ ಇಲ್ಲಿನ ಮನೆಗಳಿಂದ ಸರಿಯಾಗಿ ಕಸ ಸಂಗ್ರಹಿಸದಿರುವುದರಿಂದ ಕೆಲ ಸ್ಥಳೀಯರು ಇಲ್ಲಿಗೆ ಕಸ ಎಸೆಯುತ್ತಿದ್ದಾರೆ. ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಗಬ್ಬುನಾತ ಬೀರುತ್ತಿದೆ. ಈ ಭಾಗದಲ್ಲಿ ಹಂದಿಗಳ ಹಾವಳಿಯೂ ಹೆಚ್ಚಾಗಿದೆ. ಜನರು ರಸ್ತೆಯಲ್ಲಿ ಮೂಗು ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಸ್ಥಳದಲ್ಲಿ ಕಸ ಎಸೆಯದಂತೆ ಪಾಲಿಕೆ ಕಠಿಣ ಕ್ರಮ ಕೈಗೊಳ್ಳಬೇಕು.

– ಹರ್ಷವರ್ಧನ, ವಿಶ್ವೇಶ್ವರ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.