ADVERTISEMENT

ವಾಲ್ಮಿಯಿಂದ ಜಲ–ನೆಲ ಜಾಗೃತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 15:42 IST
Last Updated 10 ಆಗಸ್ಟ್ 2022, 15:42 IST
ಡಾ.ರಾಜೇಂದ್ರ ಪೋದ್ದಾರ
ಡಾ.ರಾಜೇಂದ್ರ ಪೋದ್ದಾರ   

ಹುಬ್ಬಳ್ಳಿ: ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ‘ವಾಲ್ಮಿ’ಯಿಂದ ವಾಲ್ಮಿ ಜಲ–ನೆಲ ಜಾಗೃತಿ ವಿಶೇಷ ಕಾರ್ಯಕ್ರಮ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರ ಆಗಲಿದೆ. ಧಾರವಾಡ ಆಕಾಶವಾಣಿ ಕೇಂದ್ರವು ಈ ಕಾರ್ಯಕ್ರಮ ನಿರ್ಮಾಣ ಮಾಡಿದೆ.

‘ಬುಧವಾರದಿಂದಲೇ ಕಾರ್ಯಕ್ರಮ ಆರಂಭವಾಗಿದೆ. ಹತ್ತು ವಾರಗಳ ಕಾಲ ಪ್ರತಿ ಬುಧವಾರ ಬೆಳಿಗ್ಗೆ 7.15ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದ್ದು, ಜಮೀನುಗಳ ಸಮತಟ್ಟು, ತುಂತುರು ಹನಿ ನೀರಾವರಿ, ಬೆಳೆಗೆ ಅವಶ್ಯವಾಗಿರುವ ನೀರು, ನೀರಿನ ಲಭ್ಯತೆ, ಇಳುವರಿ ಪರೀಕ್ಷೆ, ಮಳೆಯಾಶ್ರಿತ ಬೆಳೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ತಜ್ಞರು ರೈತರಿಗೆ ಮಾಹಿತಿ ನೀಡಲಿದ್ದಾರೆ’ ಎಂದು ವಾಲ್ಮಿಯ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಹೇಳಿದರು.

ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕ ಡಾ.ಬಸು ಬೇವಿನಗಿಡದ, ಸಂಚಾಲಕ ಶರಣಬಸವ ಚೋಳಿನ, ವಾಲ್ಮಿಯ ಸುರೇಶ ಕುಲಕರ್ಣಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.