ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕು ಗ್ರಾಮೀಣ ಘಟಕದ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆಯಾಗಿ ಸುಮಾದೇವಿ ಹಿರೇಮಠ ಹಾಗೂ ಉಪಾಧ್ಯಕ್ಷೆಯಾಗಿ ಪದ್ಮಾವತಿ ಬಾಗಲಕೋಟೆ, ಶಶಿಕಲಾ ಶಾಸ್ತ್ರಿಮಠ ಅವರು ಆಯ್ಕೆಯಾಗಿದ್ದಾರೆ.
ನಗರದ ಜಯಚಾಮರಾಜ ನಗರದ ಅಕ್ಕನ ಬಳಗದಲ್ಲಿ ಈಚೆಗೆ ನಡೆದ ಹುಬ್ಬಳ್ಳಿ ತಾಲ್ಲೂಕು ಗ್ರಾಮೀಣ ಘಟಕದ ಮಹಿಳಾ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಘಟಕದ ಗೌರವ ಅಧ್ಯಕ್ಷೆಯಾಗಿ ಲಕ್ಷ್ಮಿ ಬಿಜ್ಜರಗಿ. ಪ್ರಧಾನ ಕಾರ್ಯದರ್ಶಿಯಾಗಿ ಜಯಶ್ರೀ ಮಂಗಳೂರು. ಸಹಕಾರ್ಯದರ್ಶಿಯಾಗಿ ವಂದನಾ ಕರಾಳೆ. ಸಂಘಟನಾ ಕಾರ್ಯದರ್ಶಿಗಳಾಗಿ ಉಮಾ ಸುತಗಟ್ಟಿ, ಸ್ನೇಹಾ ಜಾಧವ, ಅನ್ನಪೂರ್ಣ ಪಾಟೀಲ, ಮಂಗಳಾ ತಿಪ್ಪಶೆಟ್ಟಿ. ಖಜಾಂಚಿಯಾಗಿ ವಿಜಯಾ ಗುಡಗೇರಿ, ಸಹ ಖಜಾಂಚಿಯಾಗಿ ತೇಜಸ್ವಿನಿ ಬೆಂಗಳೂರು ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಣಿ ಮಂಡಳಿ ನಿರ್ದೇಶಕರಾಗಿ ಮಂಜುಳಾ ಬೆಣ್ಣಿ, ಲೀಲಾ ಸಿಂದಗಿ, ಉಮಾ ಚವ್ಹಾಣ್, ಭಾಗ್ಯಶ್ರೀ ಗಾಳೆಮ್ಮನವರ, ಗಿರಿಜಾ ಮುಗಳಿ, ಪೂಜಾ ಹಿರೇಗೌಡರ, ದಿವ್ಯಾ ದೇವುಡ್ಕರ, ವಿಜಯಲಕ್ಷ್ಮಿ ಟೊಂಗಳಿ, ವಿದ್ಯಾ ಮಟ್ಟಿ, ಶೈಲಜಾ ಶಂಕರಶೆಟ್ಟಿ, ಅನ್ನಪೂರ್ಣ ಜೇಕಿನಕಟ್ಟಿ, ರತ್ನಾ ಬಸಾಪೂರ, ಸುಧಾ ಗುಂಜಾಳ, ಅಕ್ಷತಾ ಬ್ಯಾಹಟ್ಟಿ, ಅನುಪಮಾ ಪಾಟೀಲ, ಜಯಶ್ರೀ ನಿಂಬರಗಿ, ಸರ್ವಮಂಗಳ ಕುದುರಿ, ಮೀನಾಕ್ಷಿ ಯರಿಮನಿ, ಪ್ರಭಾವತಿ ಮಠದ, ರೇಖಾ ರಿತ್ತಿ, ನಿರ್ಮಲಾ ಹಿರೇಮಠ, ಶಕುಂತಲಾ ಮುಗಳಿ ಆಯ್ಕೆಯಾದರು.
ಜಯಶ್ರೀ ಗೌಳಿ, ತಾರದೇವಿ ವಾಲಿ, ಸಂಸ್ಥಾಪಕ ಗಂಗಾಧರ ದೊಡ್ಡವಾಡ, ಹುಬ್ಬಳ್ಳಿ ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಶೆಟ್ಟರ ಅವರು ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದರು. ಅನ್ನಪೂರ್ಣ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.