ADVERTISEMENT

ಅಧಿಕಾರಿ ಕಚೇರಿ ಪೀಠೋಪಕರಣಗಳ ಜಪ್ತಿ

ಸೂಕ್ತ ಪರಿಹಾರ ನೀಡಲು ವಿಫಲರಾದ ಉಪವಿಭಾಗಧಿಕಾರಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2015, 9:11 IST
Last Updated 9 ಜೂನ್ 2015, 9:11 IST
ಗದಗ ಉಪವಿಭಾಗಾಧಿಕಾರಿ ಕಚೇರಿ ಪೀಠೊಪಕರಣಗಳನ್ನು ಜಪ್ತಿ ಮಾಡಲಾಯಿತು.
ಗದಗ ಉಪವಿಭಾಗಾಧಿಕಾರಿ ಕಚೇರಿ ಪೀಠೊಪಕರಣಗಳನ್ನು ಜಪ್ತಿ ಮಾಡಲಾಯಿತು.   

ಗದಗ:  ನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿದ್ದ 4.33 ಎಕರೆ ಭೂಮಿಗೆ ಪರಿಹಾರ ನೀಡದ ಕಾರಣ ಉಪವಿಭಾಗಾಧಿಕಾರಿ ಕಚೇರಿ ವಾಹನ ಸೇರಿದಂತೆ ಇತರೆ ಉಪಕರಣ ಜಪ್ತಿ ಮಾಡಲಾಗಿದೆ.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯದ ಆದೇಶದ ಮೇರೆಗ ಸೋಮವಾರ ಗದಗ ಉಪವಿಭಾಗಾಧಿಕಾರಿ ಕಚೇರಿಯ ಕಂಪ್ಯೂಟರ್, ವಾಹನ, ಕುರ್ಚಿಗಳು, ಆಲ್ಮೇರಾ ಸೇರಿದಂತೆ ಇತರೆ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. 1977 ರಲ್ಲಿ ಆರ್.ಆರ್. ಹೇಮಂತಕುಮಾರ ಹಾಗೂ ಇತರರಿಗೆ ಸೇರಿದ 4.33 ಎಕರೆ ಜಮೀನನ್ನು ಎಪಿಎಂಸಿ ನಿರ್ಮಾಣಕ್ಕಾಗಿ ಸ್ವಾಧೀನ

ಪಡಿಸಿಕೊಳ್ಳಲಾಗಿತ್ತು.  ಅಂದು ಪ್ರತಿ ಚದರ ಸೆಂಟಿ ಮೀಟರ್‌ಗೆ  76 ಪೈಸೆ ನಿಗದಿ ಮಾಡಿ ಸ್ವಾಧೀನ ಮಾಡಲಾಗಿತ್ತು. ಆದರೆ ಹೇಮಂತಕುಮಾರ ಹಾಗೂ ಇತರರು ಇದಕ್ಕೆ ಒಪ್ಪದೇ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.   ವಿಚಾರಣೆ ನಡೆಸಿದ ನ್ಯಾಯಾಲಯ, ರೈತರ ಜಮೀನಿಗೆ ಪ್ರತಿ ಚದರ ಸೆಂಟಿ ಮೀಟರ್‌ಗೆ ಪ್ರಸ್ತುತ ಮಾರುಕಟ್ಟೆ ದರ ರೂ 8.50 ರಂತೆ ಖರೀದಿಸಿ, ರೂ 1,09,60,045 ಪರಿಹಾರ ವಿತರಿಸುವಂತೆ ಆದೇಶ ನೀಡಿತ್ತು.   ರೈತರ ಪರವಾಗಿ ವಕೀಲರಾದ ಜೆ.ಎಲ್.ಜಾಧವ, ಎಸ್.ಎಸ್.ಹುರಕಡ್ಲಿ ಹಾಗೂ ನ್ಯಾಯಾಲಯ ಆದೇಶ ಜಾರಿಗಾರರಾದ (ಬೆಲೀಫ್) ವಿ.ಎಂ.ಬೆನಕಲ್ಮಠ, ಎಫ್.ವಿ. ಮೇಧಾರ ಇದ್ದರು.

ಮುಖ್ಯಾಂಶಗಳು
4.33 ಎಕರೆ ಜಮೀನು ಎಪಿಎಂಸಿ ನಿರ್ಮಾಣಕ್ಕಾಗಿ ಸ್ವಾಧೀನ
ರೂ 8.50 ದರವನ್ನು ಪ್ರತಿ ಚದರ ಸೆಂಟಿ ಮೀಟರ್‌ಗೆ ನೀಡಲು ಆದೇಶ
* ಜಪ್ತಿಗೆ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯದ ಆದೇಶ
* ಕಚೇರಿಯ ಕಂಪ್ಯೂಟರ್‌, ವಾಹನ, ಕುರ್ಚಿ, ಅಲ್ಮೆರಾ ಜಪ್ತಿ
* ರೂ 1.09 ಕೋಟಿ ನೀಡಲು ಆದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.