ADVERTISEMENT

ಎಂಇಪಿ ಚುನಾವಣಾ ಪ್ರಚಾರ ವಾಹನ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 10:21 IST
Last Updated 29 ಮಾರ್ಚ್ 2018, 10:21 IST

ಗದಗ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಗೆ (ಎಂಇಪಿ) ಸೇರಿದ ಪ್ರಚಾರ ವಾಹನವೊಂದನ್ನು ಚುನಾವಣಾ ಜಾಗೃತದಳ ಸಿಬ್ಬಂದಿ ಬುಧವಾರ ಗದುಗಿನಲ್ಲಿ ವಶಕ್ಕೆ ಪಡೆದರು.

ಎಂಇಪಿ ಪಕ್ಷದ ನಾಯಕಿಯ ಭಾವಚಿತ್ರ, ಪಕ್ಷದ ಚಿಹ್ನೆ ಹಾಗೂ ಘೋಷವಾಕ್ಯಗಳನ್ನೊಳಗೊಂಡ ಪ್ರಚಾರ ವಾಹನ ಗದಗ–ಬೆಟಗೇರಿ ಅವಳಿ ನಗರದಲ್ಲಿ ಸಂಚರಿಸುತ್ತಿತ್ತು. ಗದಗ ಮತಕ್ಷೇತ್ರದ ಜಾಗೃತ ದಳದ ಸಿಬ್ಬಂದಿ ವಾಹನ ತಡೆದು ಪರಿಶೀಲಿಸಿದರು. ಬಳಿಕ ವಾಹನ ವಶಕ್ಕೆ ಪಡೆದು ಉಪವಿಭಾಗಾಧಿಕಾರಿ ಕಚೇರಿ ಆವರಣಕ್ಕೆ ತೆಗೆದುಕೊಂಡು ಹೋದರು.

‘ನೀತಿ ಸಂಹಿತೆ ಉಲ್ಲಂಘನೆಯಡಿ ಎಂಇಪಿ ಪ್ರಚಾರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಗದಗ ಮತಕ್ಷೇತ್ರದ ಆರ್‌.ಒ, ಉಪವಿಭಾಗಾಧಿಕಾರಿ ಪಿ.ಎಸ್‌. ಮಂಜುನಾಥ ಅವರು ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.