ADVERTISEMENT

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 7:45 IST
Last Updated 16 ಜೂನ್ 2017, 7:45 IST
ಗಜೇಂದ್ರಗಡದ ಕ.ರ.ವೇ ಕಾರ್ಯಕರ್ತರು ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ನೀಡಿರುವ ಮೀಸಲಾತಿಯನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಗಜೇಂದ್ರಗಡದ ಕ.ರ.ವೇ ಕಾರ್ಯಕರ್ತರು ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ನೀಡಿರುವ ಮೀಸಲಾತಿಯನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು   

ಗಜೇಂದ್ರಗಡ: ಪಟ್ಟಣದ ಕ.ರ.ವೇ ಕಾರ್ಯಕರ್ತರು ಎಲ್ಲ ವರ್ಗದ ವಿದ್ಯಾರ್ಥಿ ಗಳಿಗೆ ಸರ್ಕಾರ ಉಚಿತ ಪಾಸ್, ಕರ್ನಾಟಕ ದರ್ಶನ ಪ್ರವಾಸದ ಅವಕಾಶ ನೀಡಬೇಕು ಎಂದು ಆಗ್ರಹಿಸಿ ತಹಶೀ ಲ್ದಾರ್ ಮೂಲಕ ಸಿ.ಎಂ.ಗೆ ಮನವಿ ಸಲ್ಲಿಸಿದರು.

ಕ.ರ.ವೇ. ತಾಲ್ಲೂಕು ಘಟಕದ ಅಧ್ಯಕ್ಷ ರಜಾಕ್ ಢಾಲಾಯತ್ ಮಾತ ನಾಡಿ ರಾಜ್ಯ ಸರ್ಕಾರ ಎಸ್.ಸಿ, ಎಸ್.ಟಿ ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರು ವುದು ಖಂಡನಾರ್ಹ. ಎಲ್ಲ ವರ್ಗದವ ರಲ್ಲಿ ಬಡ ಮಕ್ಕಳಿದ್ದು, ಕೇವಲ ಒಂದು ವರ್ಗಕ್ಕೆ ಜಾರಿ ಮಾಡುವುದು ಸರಿಯಲ್ಲ.

ಬರಗಾಲದಿಂದ ರೈತರು ಬೆಳೆ ಇಲ್ಲದೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರ ದಾಡುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಚಿಂತರಾಗುತ್ತಿದ್ದಾರೆ. ರಾಜ್ಯ ಸರ್ಕಾರ ಜಾತಿ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು ಮುಂದಾಗಿರುವುದು ಸಲ್ಲ.

ADVERTISEMENT

ವಿದ್ಯಾರ್ಥಿಗಳ ನಡುವೆ ಈ ರೀತಿಯ ತಾರತಮ್ಯ ಮಾಡು ವುದು ಸರಿಯಲ್ಲ. ಕೂಡಲೆ ರಾಜ್ಯ ಸರ್ಕಾರ ಈ ಆದೇಶವನ್ನು ಎಲ್ಲ ವರ್ಗದ ವರ್ಗದ ವಿದ್ಯಾರ್ಥಿಗಳಿಗೆ ಅನ್ವಯಿಸ ಬೇಕು ಎಂದು ಆಗ್ರಹಿಸಿದರು.

ವಿರೇಶ ಶೀವಶಿಂಪಗೇರ್, ಹೂವಾಜಿ ಚಂದುಕರ, ಹುಸೇನ್ ಕವಲೂರ, ಮಾರುತಿ ಬಂಕದ, ನೀಲಪ್ಪ ಚಲವಾದಿ, ನಾಗರಾಜ ಬಂಕದ, ರಾಘು ಮಾದರ, ಮುಸ್ತಾಕ ಹುಟುಗೂರ, ಹನಮಂತ ಘೋರ್ಪಡೆ, ಬಿಮಪ್ಪ ಬಂಕದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.