ADVERTISEMENT

ಕಡಲೆಗೆ ಕೀಡಿ ಕಾಟ: ಆತಂಕ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 8:43 IST
Last Updated 20 ನವೆಂಬರ್ 2017, 8:43 IST

ಮುಳಗುಂದ: ಹವಾಮಾನ ವೈಪರೀತ್ಯದಿಂದ ಕಳೆದ ಮೂರು ದಿನಗಳಲ್ಲಿ ಮೋಡಕವಿದ ವಾತಾವರಣ ಉಂಟಾಗಿದ್ದು ಕಡಲೆ ಬೆಳೆಗೆ ಕೀಡಿ ಕಾಟ ಹೆಚ್ಚಿದೆ. ಇದರಿಂದ ಇಳುವರಿ ಕ್ಷೀಣಿಸುವ ಆತಂಕ ರೈತರನ್ನು ಕಾಡುತ್ತಿದೆ.

ಮಳೆ ಕೊರತೆಯಿಂದ ಈ ಬಾರಿ ವಾಣಿಜ್ಯ ಬೆಳೆಗಳಿಲ್ಲದೇ ರೈತರು ಸಂಕಷ್ಟ ಎದುರಿಸಿದ್ದಾರೆ. ಹಿಂಗಾರು ಮಳೆಯಿಂದ ಅಲ್ಪ ಚೇತರಿಕೆ ಕಂಡಿದ್ದ ರೈತರು ಈ ಭಾಗದಲ್ಲಿ ಕಡಲೆ, ಜೋಳ, ಕುಸಬಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ, ಈಗ ಕಡಲೆ ಬೆಳೆಗೆ ಕೀಡಿಗಳ ಕಾಟ ಕಂಡುಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪರಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ.

ಕಡಲೆ ಬೆಳೆಗೆ ತಗುಲಿರುವ ಕೀಡಿ ಬಾಧೆ ತಡೆಯಲು ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಇಮಾಮಿ ಬೆಲ್ಟು– 8 ಕ್ರಿಮಿನಾಶಕವನ್ನು 16 ಲೀ. ನೀರಿಗೆ 5 ಗ್ರಾಂ ಮಿಶ್ರಣ ಮಾಡಿ ಸಿಂಪರಿಸಬೇಕು ಎಂದು ಕೃಷಿ ಅಧಿಕಾರಿ ಎಂ.ಬಿ.ಸುಂಕಾಪುರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.