ADVERTISEMENT

ಕಷ್ಟಪಡದೇ ಯಶಸ್ಸು ಸಾಧ್ಯವಿಲ್ಲ: ಇನಾಮತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 6:25 IST
Last Updated 22 ಮಾರ್ಚ್ 2012, 6:25 IST

ಮುಂಡರಗಿ: `ಜೀವನದಲ್ಲಿ ಕಷ್ಟ ಪಡದೇ ಯಶಸ್ಸು, ಕೀರ್ತಿ, ಹಣ ದೊರೆಯ ಲಾರವು. ಆದ್ದರಿಂದ ಮಕ್ಕಳು ಶಾಲೆ ಮತ್ತು ಮನೆಯಲ್ಲಿ ಕೆಲಸ ಮಾಡು ವುದನ್ನು ದೈಹಿಕ ಮತ್ತು ಮಾನಸಿಕ ಶ್ರಮ ಎಂದು ಭಾವಿಸದೆ, ಕೆಲಸ ಮಾಡು ವುದನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳ ಬೇಕು ಎಂದು ಜಿಲ್ಲಾ ಶೈಕ್ಷಣಿಕ ಆಡಳಿತ ಪರಿಷತ್ ಸದಸ್ಯೆ ಭಾಗ್ಯಲಕ್ಷ್ಮಿ ಇನಾಮತಿ ಹೇಳಿದರು.

 ಶಿಂಗಟಾಲೂರ ಕ್ಲಷ್ಟರ್ ಮಟ್ಟದ ಎನ್‌ಎಫ್‌ಜಿಇಎಲ್ ಯೋಜನೆಯ ಅಡಿ ತಾಲ್ಲೂಕಿನ ಗಂಗಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಹಾಜರಾತಿ ಆಂದೋಲನದಲ್ಲಿ ಭಾಗ ವಹಿಸಿ ಮಾತನಾಡಿದರು.

 `ಮಕ್ಕಳು ಸೋಮಾರಿತನದಿಂದ ದೂರವಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ರೂಢಿಸಿ ಕೊಳ್ಳಬೇಕೆಂದು ಹೇಳಿದರು. ಬಾಹ್ಯ ಮತ್ತು ಆಂತರಿಕ ವ್ಯಕ್ತಿತ್ವವನ್ನು ವಿಕಸನ ಗೊಳಿಸಿಕೊಳ್ಳಲು ಪ್ರಯತ್ನಿಸಬೇಕು. ಆ ಹಿನ್ನೆಲೆಯಲ್ಲಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶಿನ ನೀಡಬೇಕು ಎಂದು ಸಲಹೆ ನೀಡಿದರು. ` ಶರೀರ ಮತ್ತು ಮನಸ್ಸುಗಳು ವ್ಯಕ್ತಿತ್ವದ ಒಂದೇ ನಾಣ್ಯದ ಎರಡು ಮುಖ ಗಳಿದ್ದಂತೆ ಎಂದು  ತಿಳಿಸಿದರು.

`ದೇಶದ ಎಲ್ಲ ಮಕ್ಕಳೂ ಸಾಕ್ಷರರಾಗಬೇಕೆನ್ನುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪುಸ್ತಕ, ಬಟ್ಟೆ, ಸೈಕಲ್ ಮೊದಲಾದ ಎಲ್ಲ ರೀತಿಯ ಸಹಾಯ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸಹಾಯದಿಂದ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಮಾರಂಭವನ್ನು ಉದ್ಘಾಟಿಸಿದ ಜಿ.ಎಸ್.ನಂದಗಾವಿ ಮನವಿ ಮಾಡಿದರು.  

 ಎಸ್‌ಡಿಎಂಸಿ ಅಧ್ಯಕ್ಷ ಗುರುಲಿಂಗಯ್ಯ ಸಾಲಿಮಠ ಸಮಾರಂಭದ ಅಧ್ಯತಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸುರೇಶ ಶಿರಹಟ್ಟಿ, ಕೆಳಗಿನಮನಿ, ಶಿವಪ್ಪ ಬಂಡಿ, ನೀಲಪ್ಪ ಮಾವಿನಕಾಯಿ, ದ್ಯಾಮಣ್ಣ ಕದಾಂಪೂರ ಮತ್ತಿತರರು ಹಾಜರಿದ್ದರು.  ನಾಗರಾಜ ಹಳ್ಳಿಕೇರಿ ಸ್ವಾಗತಿಸಿದರು. ಎನ್‌ಎಫ್‌ಜಿಇಎಲ್ ಸಂಚಾಲಕಿ ನಿರ್ಮಲಾ ಕವಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ವಿ.ಪೂಜಾರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.