ಗಜೇಂದ್ರಗಡ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಸ್ಥಳೀಯ ಶ್ರಮಿಕರ (ಹಮಾಲರ) ಕಾಲೊನಿ ನಾಗರಿಕರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭ ಟಿಸಿದ ಘಟನೆ ಶುಕ್ರವಾರ ನಡೆದಿದೆ.
ಶ್ರಮಿಕರ (ಹಮಾಲರ) ಕಾಲೊನಿ ಪಟ್ಟಣದಲ್ಲಿಯೇ ಇದ್ದರೂ ಸಮೀಪದ ರಾಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ ಶ್ರಮಿಕರ ಕಾಲೊನಿಗೆ ಸಮರ್ಪಕ ನೀರು ಪೂರೈ ಸುವಲ್ಲಿ ತಾರ ತಮ್ಯ ನೀತಿ ಅನುಸರಿಸುತ್ತದೆ. ರಾಮಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳಿಗೂ ಸಮರ್ಪಕ ನೀರು ಪೂರೈಸುವ ಗ್ರಾ.ಪಂ ಆಡಳಿತ ಶ್ರಮಿಕರ ಕಾಲೊನಿಗೆ ಉದ್ದೇಶ ಪೂರಕವಾಗಿಯೇ ನೀರು ಸರಬರಾಜಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
15 ದಿನಕೊಮ್ಮೆ ನೀರು: ಶ್ರಮಿಕರ ಕಾಲೊನಿ ಸ್ಥಳೀಯ ಪುರಸಭೆ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪಂಪ್‌ಹೌಸ್ (ನೀರು ಸಂಗ್ರಹಗಾರ) ಕೂಗಳತೆ ದೂರದಲ್ಲಿದ್ದರೂ ಪುರಸಭೆಯವರು ಶ್ರಮಿಕರ ದಾಹ ತನಿಸಲು ನೀರು ಕೊಡುತ್ತಿಲ್ಲ. ಹೀಗಾಗಿ ಕಾಲೊನಿ ಸುತ್ತ ಮುತ್ತಲಿನ ತೋಟಗಳಿಗೆ ತೆರಳಿ ನೀರು ಸಂಗ್ರಹಿಸಬೇಕಾದ ಅನಿವಾರ್ಯತೆ ಇದೆ.
ಶ್ರಮಿಕರ ಕಾಲೊನಿಯ ಜನಸಂಖ್ಯೆಗೆ ಅನುಗುಣವಾಗಿ ಗ್ರಾ.ಪಂನವರು ಸಾರ್ವಜನಿಕ ನಲ್ಲಿಗಳನ್ನು ಸ್ಥಾಪಿಸಿಲ್ಲ. ಪರಿಣಾಮ ಹದಿನೈದು ದಿನ ಕ್ಕೊಮ್ಮೆ ಸರಬರಾಜಾಗುವ ನೀರನ್ನು ಪಡೆಯಲು ನಾಗರಿಕರು ಮುಗ್ಗಿ ಬೀಳು ತ್ತಿದ್ದಾರೆ. ಅದನ್ನು ಸಮರ್ಪಕವಾಗಿ ಒದಗಿಸದೇ ಕೇವಲ ಅರ್ಥ ಗಂಟೆಗೆ ಮಾತ್ರ ಸೀಮಿತ ಗೊಳಿಸಿದ್ದಾರೆ. ಹೀಗಾಗಿ ಕುಡಿಯುವ ನೀರಿಗೆ ತೀವ್ರ ತಾತ್ವಾರ ಪಡುವಂತಾಗಿದೆ ಎಂಬುದು ಶ್ರಮಿಕರ ಅಳಲು.
ಗಜೇಂದ್ರಗಡದಲ್ಲಿನ ಶ್ರಮಿಕರ ಕಾಲೊನಿಯನ್ನು ಸ್ಥಳೀಯ ಪುರಸಭೆ ವ್ಯಾಪ್ತಿಗೆ ಒಳಪಡಿಸಬೇಕು. ನಾಗರಿಕರ ಅನುಕೂಲಕ್ಕಾಗಿ ಗಟಾರು, ನಲ್ಲಿ, ವಿದ್ಯುತ್ ಸಂಪರ್ಕ ವ್ಯವಸ್ಥೆ, ರಸ್ತೆ ಗಳನ್ನು ನಿರ್ಮಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸ ಲಾಗುವುದು ಎಂದು ಎಚ್ಚರಿಸಿದರು.
ಹನಮವ್ವ ಹರಪ್ಪನಳ್ಳಿ, ಶೇಖವ್ವಾ ಕಲಾಲ, ಉಮ್ಮವ್ವ ಕಲಾಲ, ಶೇಖವ್ವಾ ವದೇಗೋಳ, ಲಲಿತಾ ನಾಯಕ, ರೇಣುಕಾ ಹೊಸಮನಿ, ವಂದೆವ್ವಾ ವಾಲ್ಮೀಕಿ, ಯಲ್ಲಮ್ಮ ಕಲಾಲ, ಮಾಬುಲಿ ಸಾಂಗ್ಲೀಕರ್, ದಾವಲಬಿ ಬಾಗವಾನ, ರಾಜೇಶ್ವರಿ ಬುಳ್ಕಾ, ರೇಣವ್ವಾ ಹರಪ್ಪನಳ್ಳಿ, ಹನಮವ್ವ ಮದ್ನೇರಿ ಸೇರಿದಂತೆ ಬಡಾವಣೆಯ ನಾಗರಿಕರು ಪ್ರತಿಭಟನೆಯಲ್ಲಿ ಉಪ ಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.