ADVERTISEMENT

ಕುರಿ-ಮೇಕೆಗಳಿಗೆ ಮೇವು ಕೇಂದ್ರ ಸ್ಥಾಪಿಸಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 6:10 IST
Last Updated 5 ಜುಲೈ 2012, 6:10 IST

ಮುಂಡರಗಿ: ದನ ಕರುಗಳಿಗೆ ತಾಲ್ಲೂ ಕಿನಲ್ಲಿ ಗೋಶಾಲೆ ತೆರೆದಿರುವಂತೆ ತಾಲ್ಲೂಕಿನಲ್ಲಿರುವ ಕುರಿ ಹಾಗೂ ಮೇಕೆಗಳ ರಕ್ಷಣೆಗಾಗಿ ವಿಶೇಷ ಮೇವು ಕೇಂದ್ರವನ್ನು ತೆರೆಯಬೇಕೆಂದು ಸಂಗೊಳ್ಳಿ ರಾಯಣ್ಣ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾ ದನಾ ಸಹಕಾರ ಸಂಘದ ನೇತೃತ್ವದಲ್ಲಿ ತಾಲ್ಲೂಕಿನ ಕುರಿಗಾರರು ಸೋಮ ವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಬಡ ಕುರಿ ಗಾರರು ಗುಳೆ ಹೋಗಬೇಕಾದ ಪರಿ ಸ್ಥಿತಿ ನಿರ್ಮಾಣವಾಗಿದೆ. ಕುರಿ ಮತ್ತು ಮೇಕೆ ಸಾಕಾಣಿಕೆಯು ತಾಲ್ಲೂಕಿನ ಬಹುತೇಕ ಕುರುಬರ ಮುಖ್ಯ ಉದ್ಯೋಗವಾಗಿದ್ದು, ಸಕಾಲದಲ್ಲಿ ಮಳೆ ಸುರಿಯದ್ದರಿಂದ ಕುರಿ ಮತ್ತು ಮೇಕೆಗಳ ಸಮೇತ ಅವರೆಲ್ಲ ಈಗ ಬೀದಿ ಪಾಲಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಳೆಯಾಗದೆ ಇರುವುದರಿಂದ ರೈತರ ಜಮೀನುಗಳೆಲ್ಲ ಬೆಳೆ ಇಲ್ಲದೆ ಹಾಳು ಸುರಿಯುತ್ತಲಿದ್ದು, ದನ, ಕರು, ಕುರಿ, ಮೇಕೆಗಳಿಗೆ ಮೇಯಲು ಎಳ್ಳಷ್ಟು ಹಸಿರು ಹುಲ್ಲು ಇಲ್ಲದಂತಾ ಗಿದೆ. ತಾಲ್ಲೂಕಿನ ಉದ್ದಕ್ಕೂ ಕಪ್ಪತ ಗುಡ್ಡ ಹಬ್ಬಿದ್ದು, ಅದರಲ್ಲಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕುರಿ ಗಳನ್ನು ಮೇಯಿಸಲು ಕುರಿಗಾರರಿಗೆ ಅನಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 ತಾಲ್ಲೂಕು ಆಡಳಿತವು ಅಲೆಮಾರಿ ಕುರುಬರ ಮಕ್ಕಳಿಗಾಗಿ ವಸತಿ ಸಹಿತ ವಿಶೇಷ ಸಂಚಾರಿ ಶಾಲೆಗಳನ್ನು ತೆರೆಯ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕುರುಬರ ಉಪ ಕಸುಬಾಗಿರುವ ಕಂಬಳಿ ನೇಕಾರಿಕೆಯು ಇಂದು ಅವ ಸಾನದ ಅಂಚಿನಲ್ಲಿದ್ದು, ರಾಜ್ಯ ಸರ್ಕಾರವು ಮಹಾರಾಷ್ಟ್ರ ಮಾದರಿ ಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಂಬಳಿ ಬ್ಯಾಂಕ್ ಸ್ಥಾಪಿಸಬೇಕು. ಮತ್ತು ಅವರ ಉದ್ಯೋಗವನ್ನು ಉತ್ತೇಜಿಸುವ ಸಲು ವಾಗಿ ಎಲ್ಲ ಕಂಬಳಿ ನೇಕಾರರಿಗೆ ಬಡ್ಡಿ ರಹಿತ ಸಾಲ ನೀಡಬೇಕು. ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ರಾಜ್ಯದ ಎಲ್ಲ ಕಂಬಳಿ ನೇಕಾರರಿಗೆ ನೂಲಿನ ಪಾಸ್ ಬುಕ್ ಸೌಲಭ್ಯ ನೀಡ ಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕುರಿ ಸಂಗೋಪನಾ ಮಹಾಮಂಡಳ ಮತ್ತು ಉಣ್ಣೆ ಅಭಿವೃದ್ಧಿ ಸಹಕಾರ ಮಹಾ ಮಂಡಳ ಸ್ಥಾಪಿಸಬೇಕು. ಆರೋಗ್ಯಶ್ರಿ ಯೋಜ ನೆಯ ಅಡಿಯಲ್ಲಿ ರಾಜ್ಯದ ಎಲ್ಲ ಕುರಿ ಗಾರರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಕುರಿ ಸಂಗೋಪನೆ ಹಾಗೂ ಉಣ್ಣೆ      ಉತ್ಪಾದನಾ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಬದಾಮಿ,     ಉಪಾ ಧ್ಯಕ್ಷ ನಿಂಗಪ್ಪ ಗುಡ್ಡದ, ನಿರ್ದೇಶಕ ರಾದ ಗುಡದಯ್ಯ ಯಳವತ್ತಿ, ಮೈಲಾರೆಪ್ಪ ಶೀರನಹಳ್ಳಿ, ತಿಪ್ಪಣ್ಣ ಜುಟ್ಲಣ್ಣವರ, ರಮೇಶ ಮುದಿಯಜ್ಜ ನವರ, ಹೇಮಣ್ಣ ಗೌಡರ, ದೇವಪ್ಪ       ಕಂಬಳಿ, ವೀರಣ್ಣ ಮದ್ದೀನ, ವೆಂಕಟಪ್ಪ ಲಮಾಣಿ, ಯಲ್ಲಪ್ಪ ತಾರಿಕೊಪ್ಪ, ಈರಪ್ಪ ಕಟ್ಟಿಮನಿ, ಕರಿಯಪ್ಪ ಕಟ್ಟಿಮನಿ ಮೊದಲಾದವರು           ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.