ADVERTISEMENT

`ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯಕ್ಕೆ ಕ್ರಮ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 7:56 IST
Last Updated 16 ಜುಲೈ 2013, 7:56 IST

ರೋಣ: ಗ್ರಾಮೀಣ ಪ್ರದೇಶದ ಬಡ ಜನತೆಗೆ ಅನೂಕೂಲವಾಗುವ ದಿಶೆ ಯಲ್ಲಿ ತಾಲ್ಲೂಕು ಕೇಂದ್ರ ಸ್ಥಾನವಾದ ರೋಣದಲ್ಲಿನ ಪಂ.ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಯನ್ನು 4.31 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದ ರ್ಜೆಗೇರಿಸಿದ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು. ಜನತೆ ಇದರ ಲಾಭವನ್ನು ಪಡೆದು ಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಸೋಮವಾರ ಪಟ್ಟಣದಲ್ಲಿ ರಾಷ್ಟ್ರೀಯ ಗ್ರಾಮೀಣ ಅಭಿಯಾನ, ಕರ್ನಾಟಕ ಆರೋಗ್ಯ ಪದ್ದತಿ, ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ, ಜಿಲ್ಲಾ ಡಳಿತ, ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ ಮತ್ತು ರೋಣ ಇವರುಗಳ ಸಂಯುಕ್ತಾ ಶ್ರಯದಲ್ಲಿ ಮೇಲ್ದರ್ಜೆಗೇರಿಸಿದ 100 ಹಾಸಿಗೆಗಳ ಪಂ.ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ನಿಮಾರ್ಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು. 

ಪಟ್ಟಣದಲ್ಲಿ ಮೊದಲಿದ್ದ 50 ಹಾಸಿಗೆಯ ಈ ಸಾರ್ವಜನಿಕ ಆಸ್ಪತ್ರೆ ಯನ್ನು ಮೇಲ್ದರ್ಜೆಗೇರಿಸಿ100 ಹಾಸಿಗೆ ಗಳ ಆಸ್ಪತ್ರೆ ಸ್ಥಾಪನೆಯೊಂದಿಗೆ ಅಗತ್ಯ ವಿರುವ ವೈದ್ಯರನ್ನು, ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು   ಎಂದರು.

ಈಗಾಗಲೇ ಖಾಲಿ ಇರುವ ವೈದ್ಯ ಹುದ್ದೆ ಗಳನ್ನು ಶಿಘ್ರದಲ್ಲಿ ತುಂಬಲಾಗು ವುದು. ಇನ್ನು ಮುಂದೆ ದುಬಾರಿ ಔಷಧ ಗಳನ್ನು ಕಡಿಮೆ ದರದಲ್ಲಿ ಸಿಗುವಂತೆ ಮಾಡಲು ಸರ್ಕಾರ ಜನರಿಕ್ ಮೆಡಿಸನ್ (ನಮ್ಮಲ್ಲೆ ತಯಾರಿಸುವ ಔಷಧಿ) ವ್ಯವಸ್ಥೆ ಕಲ್ಪಿಸಲು ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತರಲಿದೆ ಎಂದ ಹೇಳಿದರು.

ಸಿ.ಎಂ ಸಿದ್ದರಾಮಯ್ಯ ನವರು ಮಂಡಿಸಿದ ಆಯವ್ಯಯದಲ್ಲಿ ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲಿ ಡೈಯೋಲಜಿಸ್ಟ್ ಕೇಂದ್ರವನ್ನು ತೆರೆಯುವ ಅಭಿಪ್ರಾಯ ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತನ್ನು ಸರ್ಕಾರ ನೀಡಲಿದೆ ಎಂದರು.  

ಹಿರಿಯ ವಕೀಲ ವಿ.ಆರ್.ಗುಡಿ ಸಾಗರ, ದಶರಥ ಗಾಣಿಗೇರ, ಜಿ.ಪಂ ಸದಸ್ಯ ಡಾ.ಆರ್.ಬಿ.ಬಸವರಡ್ಡೇರ ಜಿಲ್ಲಾ ವೈದ್ಯಾಧಿಕಾರಿ ಡಾ.ಬಿ.ಡಿ. ಚನಶೆಟ್ಟಿ, ವೀರಣ್ಣ ಯಾಳಗಿ ಮಾತನಾಡಿದರು.

ಸಮಾರಂಭದಲ್ಲಿ ತಹಶೀಲ್ದಾರ್ ಎಂ.ಬಿ.ಪಾಟೀಲ, ಎಇಇ   ಎಂ.ಆರ್. ಬಂಡಿ, ಡಾ.ಎಂ.ಬಿ. ಪೊಲೀಸ್  ಪಾಟೀಲ,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಲಲಿತಾ ಪುಜಾರ, ಉಪಾಧ್ಯಕ್ಷೆ ರುದ್ರವ್ವ  ತಾಳಿ, ಸದಸ್ಯರಾದ ಅಂದಪ್ಪ ಬಿಚ್ಚೂರ, ಮಾಲಾನಬೀ ಗಡಾದ, ಗಾಯತ್ರಿ ನಾಗನೂರ, ರೇಣುಕಾ ಹಟ್ಟಿಮನಿ, ಶಾಂತಾ ಬೆಳಹಾರ, ಪುರಸಭೆ ಸದಸ್ಯೆ ರತ್ನಾ ಕೊಳ್ಳಿ, ಜಯಶ್ರೀ ನವಲಗುಂದ, ತೋಟಪ್ಪ ನವಲಗುಂದ, ಮಂಜು ಹಾಳಕೇರಿ, ಖಾದರಸಾಬ ಸಂಕನೂರ, ದಾವಲಸಾಬ ಚಿನ್ನೂರ, ಶರಣಪ್ಪ ದೊಡ್ಡಮನಿ ಸೇರಿದಂತೆ ಮುಂತಾ ದವರು ಉಪಸ್ಥಿತರಿದ್ದರು.
ಎಸ್.ಎಫ್. ಅಂಗಡಿ ನಿರೂಪಿಸಿದರು. ಡಾ.ಬಿ.ಎಸ್. ಭಜಂತ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT