ADVERTISEMENT

ಜನ ಜಾಗೃತಿ ಜಾಥಾಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:05 IST
Last Updated 2 ಅಕ್ಟೋಬರ್ 2012, 5:05 IST

ಗಜೇಂದ್ರಗಡ: ಕಲುಷಿತ ನೀರು ಹಾಗೂ ಆಹಾರಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಅತಿ ಅವಶ್ಯ. ಈ ಹಿನ್ನೆಲೆಯಲ್ಲಿ ಪ್ರತಿ ಯೊಬ್ಬ ನಾಗರಿಕರು ಇಲಾಖೆ ಗಳೊಂದಿಗೆ ಸಹಕರಿಸಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಚಳಗೇರಿ ಹೇಳಿದರು.

ಇಲ್ಲಿನ ಪುರಸಭೆ, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳ ಸಹ ಯೋಗದಲ್ಲಿ ಸೋಮವಾರ ಬೃಹತ್ `ಆರೋಗ್ಯ ಜನ ಜಾಗೃತಿ~ ಮೆರವಣಿಗೆ ಯಲ್ಲಿ ಭಾಗವಹಿಸಿ ಮಾತನಾಡಿ, ಅವರು, ಇತ್ತೀಚಿನ ದಿನಗಳಲ್ಲಿ ಇಲಾಖೆ ಗಳು ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಸಾಕಷ್ಟು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿದರೂ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕಷ್ಟ ಸಾಧ್ಯವಾಗಿದೆ ಎಂದರು.

ನೀರು ಸರಬರಾಜು ಪೈಪುಗಳಿಂದ ನೀರು ಸೋರಿಕೆಯಾಗುವುದನ್ನು ಗಮ ನಿಸಿ ಸಂಬಂಧಪಟ್ಟ ಗ್ರಾಮ ಪಂಚಾ ಯಿತಿ, ಪಟ್ಟಣ ಪಂಚಾಯಿತಿ, ನಗರ ಸಭೆಗಳ ಗಮಕ್ಕೆ ತರಬೇಕು ಎಂದರು.

ಇಲ್ಲಿನ ಹಳೆಯ ಪರಿವೀಕ್ಷಣಾ ಮಂದಿರದಿಂದ ಆರಂಭಗೊಂಡ ಆರೋಗ್ಯ ಜನ ಜಾಗೃತಿ ಮೆರವಣಿಗೆ ಪುರಸಭೆ ಅಧ್ಯಕ್ಷೆ ದೇವಕ್ಕ ಬೆಳವಣಿಕಿ ಚಾಲನೆ ನೀಡಿದರು.

ಜೋಡು ರಸ್ತೆ, ಶಿವಾಜಿ ವೃತ್ತ, ದುರ್ಗಾ ವೃತ್ತ, ಹಿರೇಬಜಾರ, ವಿರೂ ಪಾಕ್ಷೇಶ್ವರ ದೇವಸ್ಥಾನ, ರಾಜವಾಡೆ, ಮೈಸೂರಮಠ ಮೂಲಕ ಪುರಸಭೆ ಯನ್ನು ತಲುಪಿತು.

ಪುರಸಭೆ ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಸದಸ್ಯರಾದ ಪ್ರಭು ಚವಡಿ, ರಾಜೇಂದ್ರ ಘೋರ್ಪಡೆ, ಬಸವರಾಜ ಬಂಕದ, ಬಾಳು ಗೌಡರ, ಸೂಗಿರಯ್ಯನಮಠ, ಬಸಮ್ಮ ಸಾಲಿಮಠ, ಪುಷ್ಪಾವತಿ ಭಾಂಡಗೆ,  ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾ ಧಿಕಾರಿ ಡಾ.ಪಿ.ಹೆಚ್. ಕಬಾಡಿ, ಹಿರಿಯ ಆರೋಗ್ಯ ಸಹಾಯಕರಾದ ಆರ್,ವಿ.ಕುಪ್ಪಸ, ಪರಮೇಶ್ವರಪ್ಪ, ವಿ.ಡಿ.ಬೆನ್ನೂರ, ಎಂ.ಬಿ.ಗದ್ದಿ, ಎಂ.ಬಿ. ನಿಡಶೇಸಿ, ಸಿ.ಬಿ.ಕುಲಕರ್ಣಿ, ಪಿ.ಎನ್. ದೊಡ್ಡಮನಿ, ಪಿ.ಡಿ.ದೊಡ್ಡ ಮನಿ, ವಿ.ಎನ್.ಕಾಳೆ, ಹೆಚ್.ಟಿ.ಮಾಡಗುಂಡಿ, ತೋಟದ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆ ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.