ಹುಕ್ಕೇರಿ: ಜ್ಞಾನಪೀಠ ಪ್ರಶಸ್ತಿ ಪಡೆಯುವಲ್ಲಿ ಡಾ.ಚಂದ್ರಶೇಖರ ಕಂಬಾರರಿಗಿಂತ ಕಾದಂಬರಿಕಾರ ಎಸ್.ಎಲ್.ಬೈರಪ್ಪ ಅವರೆ ಸೂಕ್ತ ಎಂಬ ಹೇಳಿಕೆಯನ್ನು ನೀಡಿದ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರ ಆಕ್ಷೇಪದ ಅಭಿಪ್ರಾಯವನ್ನು ಡಾ.ಕಂಬಾರರ ಊರಲ್ಲಿ ಬುಧವಾರ ಹಮ್ಮಿಕೊಂಡ `ಅಭಿನಂದನಾ ಸಭೆ~ಯಲ್ಲಿ ಖಂಡಿಸಲಾಯಿತು.
ಗ್ರಾಮದ ವತಿಯಿಂದ ಡಾ. ಚಂದ್ರಶೇಖರ ಕಂಬಾರರ ಮನೆಯ ಮುಂದೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೆಕಾಂತ ಭೂಷಿ ಮಾತನಾಡಿ ಡಾ.ಪಾಟೀಲ ಪುಟ್ಟಪ್ಪನವರು ಡಾ. ಕಂಬಾರರ ವಿರುದ್ಧ ನೀಡಿದ ಹೇಳಿಕೆ ಅವರ ಸಣ್ಣತನವನ್ನು ಪ್ರದರ್ಶಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಎರಡನೆಯ ವ್ಯಕ್ತಿ ಡಾ. ಚಂದ್ರಶೇಖರ ಕಂಬಾರ ಆಗಿದ್ದು, ಅದನ್ನು ಹೆಮ್ಮೆ ಪಡುವ ಬದಲು ತಮ್ಮ ಯೋಗ್ಯತೆಗೆ ಅಗೌರವ ಹೇಳಿಕೆ ನೀಡಿದ್ದು ವಿಷಾಧನೀಯ ಎಂದರು.
ಆಗ್ರಹ: ಡಾ. ಪಾಟೀಲ ಪುಟ್ಟಪ್ಪನವರು ಡಾ. ಕಂಬಾರರ ವಿರುದ್ಧ ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಸಭೆ ಯಲ್ಲಿ ಆಗ್ರಹಿಸಲಾಯಿತು.
ಉಪಾಧ್ಯಕ್ಷ ಮಲ್ಲಪ್ಪ ಮುಗಳಿ ಒಳಗೊಂಡು ಗ್ರಾಮ ಪಂಚಾಯಿತಿ ಸದಸ್ಯರು, ಹಿರಿಯರು ಮತ್ತು ಗ್ರಾಮ ಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.