ADVERTISEMENT

ತೊಗರಿ ‘ಕಣಜ’ಕ್ಕೆ ಹವಾಮಾನದ ಕುತ್ತು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:38 IST
Last Updated 16 ಡಿಸೆಂಬರ್ 2013, 5:38 IST

ಗಜೇಂದ್ರಗಡ: ಸಮರ್ಪಕ ಮಳೆ ಹಂಚಿಕೆಯಿಂದಾಗಿ ಸಮೃದ್ಧವಾಗಿ ಬೆಳೆದು ನಿಂತು ಹಸಿರಿನಿಂದ ಕಂಗೊಳಿಸು ತ್ತಿದ್ದ ‘ತೊಗರಿ’ ಬೆಳೆಗೆ ಹವಾಮಾನ ವೈಪರೀತ್ಯ ಮಾರಕವಾಗಿ ಪರಿಣಮಿ ಸಿದ್ದು ತೊಗರಿ ಬೆಳೆಯ ಹೂ ಮತ್ತು ಕಾಯಿಗಳು ಉದುರಲಾಂಭಿಸಿವೆ.

ರೋಣ ತಾಲ್ಲೂಕಿನಲ್ಲಿ ಅನೇಕ ದಶಕಗಳಿಂದ ಮಸಾರಿ ಪ್ರದೇಶದಲ್ಲಿ (ಕೆಂಪು ಮಿಶ್ರಿತ ಜವಗು ಪ್ರದೇಶ) ತೊಗರಿ ಬೆಳೆಯಲಾಗುತ್ತಿದೆ. ಆದರೆ ಕಳೆದ ಮೂರು ವರ್ಷಗಳಿಂದ ಬರದ ಮಂಕು ಕವಿದು ಮಸಾರಿ ಪ್ರದೇಶ ಬರಡಾಗಿ ಬೆಳೆಗಾರರು ಕಂಗಾಲಾಗಿದ್ದರು.

ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಮಸಾರಿ ಪ್ರದೇಶಗಳಾದ ಕಾಲಕಾಲೇಶ್ವರ, ಪುರ್ತಗೇರಿ, ಗೋಗೇರಿ, ಉಣಚಗೇರಿ, ಜಿಗೇರಿ, ಬೆನಸಮಟ್ಟಿ, ನಾಗರಸಕೊಪ್ಪ, ಭೈರಾಪೂರ, ಭೈರಾಪುರ ತಾಂಡಾ, ಲಕ್ಕಲಕಟ್ಟಿ, ನಾಗೇಂದ್ರಗಡ, ಮಾಟ ರಂಗಿ, ರಾಮಾಪುರ ಮುಂತಾದ ಗ್ರಾಮ ಗಳಲ್ಲಿ 477 ಮಿಲಿ ಮೀಟರ್ ಮಳೆ ಸುರಿದ ಪರಿಣಾಮ ದಾಖಲೆ ಪ್ರಮಾಣ ದಲ್ಲಿ ತೊಗರಿ ಬೆಳೆಯಲಾಗಿತ್ತು.

ರೈತರ ನಿರೀಕ್ಷೆಗೆ ತಕ್ಕಂತೆ ತೊಗರಿ ಬೆಳೆ ಕಾಯಿ ಮತ್ತು ಹೂಗಳನ್ನು ಹೊತ್ತು ಕಣ್ಮನ ಸೆಳೆಯುತ್ತಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೂ ಮತ್ತು ಕಾಯಿಗಳು ನೆಲಕಚ್ಚುತ್ತಿವೆ. ಹೀಗಾಗಿ ತೊಗರಿ ಬೆಳೆದ ರೈತರು ಕಂಗಾಲಾಗಿದ್ದಾರೆ.
‘ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿ ಕೊಳ್ಳಲು ಬೆಳೆಗಾರರು ನಡೆಸಿದ ಪ್ರಯತ್ನಗಳು ಫಲ ನೀಡಿಲ್ಲ. ಇದರಿಂ ದಾಗಿ ತೊಗರಿ ಬೆಳೆಯಿಂದ ಲಾಭ ವಿರಲಿ, ಖರ್ಚೂ ಕೈಸೇರುವ ನಂಬಿಕೆ ಇಲ್ಲ’ ಎನ್ನುತ್ತಾರೆ ವಿರೂಪಾಕ್ಷಪ್ಪ ಪಟ್ಟಣಶೆಟ್ಟಿ.

ರೋಣ ತಾಲ್ಲೂಕಿನಲ್ಲಿ ಒಟ್ಟು 1,28,235 ಹೆಕ್ಟೇರ್ ಕೃಷಿ ಸಾಗುವಳಿ ಕ್ಷೇತ್ರವಿದೆ. ಇದರಲ್ಲಿ 84,035 ಹೆಕ್ಟೇರ್ ಎರಿ ಪ್ರದೇಶವಿದ್ದು 44,200 ಹೆಕ್ಟೇರ್ ಮಸಾರಿ (ಕೆಂಪು ಮಿಶ್ರಿತ ಜವಗು) ಪ್ರದೇಶವಿದೆ. ಪ್ರಸಕ್ತ ವರ್ಷ 17,564 ಹೆಕ್ಟೇರ್ ತೊಗರಿ ಬೆಳೆಯಲಾಗಿದೆ.

ತೀರಾ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಹಾಗೂ ಲಾಭ ತಂದು ಕೊಡುವ ವಾಣಿಜ್ಯ ಬೆಳೆ ಇದು. ಎಕರೆ ತೊಗರಿ ಬಿತ್ತನೆಗೆ 2 ಕೆ.ಜಿ ಬೀಜ, 40 ಕೆ.ಜಿ ಗೊಬ್ಬರ ಹಾಗೂ ಬಿತ್ತನೆ ಕಾರ್ಯಕ್ಕೆ ಕೇವಲ 1,500 ವೆಚ್ಚ ವಾಗುತ್ತದೆ. ಒಟ್ಟು 180 ದಿನ ಬೆಳೆ ಇದಾಗಿದೆ. ಈ ಬೆಳೆಗೆ ಕ್ರಿಮಿನಾಶಕ ಗಳನ್ನು ನಿಯಂತ್ರಿಸುವ ಹಾಗೂ ತಡೆಯುವ ಶಕ್ತಿ ಇದೆ. ಸಮರ್ಪಕ ಮಳೆ ಹಾಗೂ ಸಮರ್ಪಕ ಬೆಳೆ ನಿರ್ವಹಣೆ ಕಾರ್ಯವನ್ನು ಯಶಸ್ವಿಯಾಗಿ ಮಾಡಿದರೆ ಎಕರೆಗೆ 7ರಿಂದ 8 ಕ್ವಿಂಟಲ್ ಇಳುವರಿ ಪಡೆಯಬಹುದಾಗಿದೆ ಎನ್ನುತ್ತಾರೆ ತೊಗರಿ ಬೆಳೆಗಾರ ಲೋಕಪ್ಪ ರಾಠೋಡ್.

ಈ ಹಿಂದಿನ ವರ್ಷಗಳಿಗೆ ಹೋಲಿಸಿ ದರೆ ಪ್ರಸಕ್ತ ವರ್ಷ ತೊಗರಿ ಅತ್ಯುತ್ತಮ ರೀತಿಯಲ್ಲಿ ಬೆಳೆದಿದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಯಲ್ಲಿನ ಹೂ ಮತ್ತು ಕಾಯಿಗಳು ಉದುರುತ್ತಿರುವುದು ಬೇಸರದ ಸಂಗತಿ. ಹವಾಮಾನದ ವಿರುದ್ಧ ಯಾವ ಕ್ರಮ ಕೈಗೊಂಡರೂ ಬೆಳೆ ರಕ್ಷಿಸುವುದು ಕಷ್ಟ ಎಂದು ತಾಲ್ಲೂಕು ಕೃಷಿ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.