ADVERTISEMENT

‘ದಿಂಗಾಲೇಶ್ವರ ಸ್ವಾಮೀಜಿ ಚರ್ಚೆಗೆ ಅನರ್ಹರು’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 9:32 IST
Last Updated 29 ಡಿಸೆಂಬರ್ 2017, 9:32 IST

ಗದಗ: ‘ಸ್ವತಂತ್ರ ಧರ್ಮ ಮಾನ್ಯತೆ ಕುರಿತು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ದಿಂಗಾಲೇಶ್ವರ ಸ್ವಾಮೀಜಿಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ, ಹೊರಟ್ಟಿ ಅವರ ವ್ಯಕ್ತಿತ್ವಕ್ಕೆ ಸಮಾನರಲ್ಲ’ ಎಂದು ಬಾಲೆಹೊಸೂರು ದಲಿತ ದೌರ್ಜನ್ಯ ವಿರೋಧಿ ಒಕ್ಕೂಟದ ಮುಖ್ಯಸ್ಥ ಬಸವರಾಜ ಸೂಳಿಭಾವಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ದಿಂಗಾಲೇಶ್ವರ ಸ್ವಾಮೀಜಿಯೊಂದಿಗೆ ಚರ್ಚೆಗೆ ಮುಂದಾಗಬಾರದು. ಅವರು ವಿತಂಡವಾದಿಗಳಾಗಿದ್ದು, ಚರ್ಚೆಗೆ ಅನರ್ಹರು. ಸಂವಾದ ನಡೆದರೆ, ಭೂತದ ಬಾಯಿಂದ ಭಗವದ್ಗೀತೆ ಕೇಳಲು ಹೋದಂತೆ ಆಗುತ್ತದೆ. ಆದ್ದರಿಂದ ಬಸವರಾಜ ಹೊರಟ್ಟಿ ಅವರು ಇಂಥವರೊಂದಿಗೆ ಧರ್ಮದ ಬಗ್ಗೆ ಚರ್ಚೆ ನಡೆಸಬಾರದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT