ADVERTISEMENT

ನೀರಿನ ಅಭಾವ; ಒಣಗುತ್ತಿರುವ ಬೆಳೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 9:38 IST
Last Updated 18 ಡಿಸೆಂಬರ್ 2012, 9:38 IST

ನರಗುಂದ: ತಾಲ್ಲೂಕಿನ ಬಹುತೇಕ ಜಮೀನುಗಳು ನವಿಲು ತೀರ್ಥ ಜಲಾಶಯದ ಮಲಪ್ರಭೆ ಕಾಲುವೆಯ ನೀರನ್ನೇ ಆಶ್ರಯಿಸಿವೆ. ಆದರೆ ಆ ನೀರು ಸರಿಯಾಗಿ ಕಾಲುವೆಗಳಿಗೆ ತಲುಪದೇ ಬೆಳೆದು ನಿಂತ ಬೆಳೆಗಳು ಸಂಪೂರ್ಣ ಒಣಗುವ ಸ್ಥಿತಿಗೆ  ಬಂದಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

  ಕಳೆದ ಒಂದು ತಿಂಗಳು  ಹಿಂದೆ  ಕಾಲುವೆ ನೀರನ್ನು ನಂಬಿಕೊಂಡ ು ಕಡಿಮೆ ತೇವಾಂಶದಲ್ಲಿ  ಜೋಳ, ಕಡಲೆ, ಸೂರ್ಯಕಾಂತಿ, ಕುಸುಬೆ, ಗೋದಿ ಸೇರಿದಂತೆ  ಮೊದಲಾದ  ಬೀಜ ಬಿತ್ತಿ ಅವು ಸಸಿಗಳಾಗಿ ಒಂದು ಹಂತಕ್ಕೆ ಬಂದಿವೆ.  ಬಿತ್ತನೆ ಸಮಯದಲ್ಲಿ   ನವಿಲುತೀರ್ಥದ ಜಲಾಶಯದ ನೀರನ್ನು ನಂಬಿ ರೈತರು ಸಹಸ್ರಾರು ರೂಪಾಯಿ ಗಳನ್ನು ಖರ್ಚು ಮಾಡಿ ಬೀಜ,  ಗೊಬ್ಬರ ಹಾಕಿದ್ದಾರೆ.

ಈಗ ಬೆಳೆಗಳು  ಕಾಳು ಕಟ್ಟುವ ಹಂತದಲ್ಲಿವೆ. ಆದರೆ ಅವುಗಳಿಗೆ ನೀರು ಇಲ್ಲದ ಪರಿಣಾಮ ಒಣಗುವ ಹಂತಕ್ಕೆ ತಲುಪಿವೆ.     ರೈತರ ಒತ್ತಾಯದ ಮೇರೆಗೆ ಕಳೆದ ಒಂದು ವಾರದ ಹಿಂದಷ್ಟೇ ನವಿಲು ತೀರ್ಥ ಜಲಾಶಯ ದಿಂದ ಮಲಪ್ರಭೆ ಕಾಲುವೆಗಳಿಗೆ ನೀರು ಹರಿಸುತ್ತಿದ್ದಾರೆ.

  ಆದರೆ ಆ ನೀರು ಕೇವಲ ಜಲಾಶ ಯ ಸಮೀಪವಿರುವ ಕಾಲುವೆಗಳಿಗೆ ಗೆ ಮಾತ್ರ ಬೃಹತ್ ಪ್ರಮಾಣದಲ್ಲಿ  ಹರಿಯುತ್ತಿದೆ ಹೊರತು ತಾಲ್ಲೂಕಿನ  ಶೇ.90ರಷ್ಟು  ಕಾಲುವೆಗಳಿಗೆ  ನೀರು ಹರಿಯದೇ ಇರುವುದು ಕಾಣುತ್ತಿದೆ. ಇದರಿಂದ ಕೆಲಹಂತದ ಕಾಲುವೆಗಳಿಗೆ ನೀರಿನ ದರ್ಶನವೇ ಇಲ್ಲ.

ರೈತರ ಪ್ರತಿಭಟನೆ : ಇದರಿಂದ  ಈ ಭಾಗದ ರೈತರು  ತೀವ್ರ ಆಕ್ರೋಶ  ವ್ಯಕ್ತಪಡಿಸುವಂತಾಗಿದೆ.  ಪ್ರತಿ ವರ್ಷ ಇದೇ ಸ್ಥಿತಿ ಉಂಟಾಗುತ್ತಿರವುದರಿಂದ ಜೊತೆಗೆ ಈ ಸಲ ಮಳೆಯೂ ಕೈಕೊಟ್ಟಿ ರುವುದರಿಂದ ರೈತರು ಬೀದಗಿಳಿದು ಪ್ರತಿಭಟನೆ  ಮಾಡಬೇಕಾದ ದು:ಸ್ಥಿತಿ ಬಂದೊದಗಿದೆ. ಇಷ್ಟಾದರೂ ಯಾರು ಗಮನ ನೀಡುತ್ತಿಲ್ಲ.  

ಅಕ್ರಮ ಪಂಪ್‌ಸೆಟ್: ಕಾಲುವೆ ಮೂಲಕ ಜಮೀನು ಗಳಿಗೆ ನಿಯಮಾನುಸಾರ ನೀರು ಹರಿಸಿಕೊಳ್ಳಬೇಕು. ಆದರೆ ಕೆಲವು ಪ್ರಭಾವಿ ರೈತರು  24 ಗಂಟೆಗಳ ಕಾಲ  ಅಕ್ರಮ ಪಂಪ್‌ಸೆಟ್ ಹಾಕಿಕೊಂಡು ನೀರು ಹರಿಸಿಕೊಳ್ಳುತ್ತ್ದ್ದಿದಾರೆ. ಇದಕ್ಕೆ ಯಾರೂ ಕೇಳದಂತಾಗಿದೆ. ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ನಡೆಯುತ್ತಿದೆ ಎಂದು ಕೆಳ ಹಂತದ  ರೈತರು ದೂರುತ್ತಾರೆ.

  ಇದರಿಂದ  ನೂರಾರು ರೈತರು ಅನ್ಯಾಯಕ್ಕೆ ಒಳಗಾಗು ವಂತಾಗಿದೆ. ಎಲ್ಲ ಬೆಳೆಗಳು ಒಣಗುತ್ತಿವೆ.  ಹೀಗಾದರೆ  ಈ ಭಾಗದ ರೈತರು  ಬದುಕುವು ದಾದರೂ ಹೇಗೆ ? ಜೊತೆಗೆ ಬೆಳೆಗಳಿಗೆ ನೀರು ಹರಿಸಿಕೊಳ್ಳುವುದಾದರೂ ಹೇಗೆ ಎಂದು ರೈತರು ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸುತ್ತಾರೆ. 

ಹೆಸರಿಗೆ ನೀರಾವರಿ: ನೀರಾವರಿ ಕಾಲುವೆಗಳು  ಸರಿಯಾಗಿ ನಿರ್ವಹಣೆಯ ಆಗದೇ ಇರುವುದರಿಂದ ಜೊತೆಗೆ  ನೀರು  ಬಳಕೆದಾರರ ಸಹಕಾರಿ ಸಂಘಗಳು ನಿಷ್ಕ್ರೀಯವಾಗಿದ್ದರಿಂದ ಸರಿಯಾಗಿ ಜಮೀನುಗಳಿಗೆ ನೀರು ಹರಿಯದೇ ಹೆಸರಿಗೆ ನೀರಾವರಿ ಆಗಿದೆ. ಆದ್ದರಿಂದ ಕೂಡಲೇ  ನೀರಾವರಿ ಇಲಾಖೆ ಮೇಲಾಧಿಕಾರಿಗಳು ಹಾಗೂ ಮಂತ್ರಿಗಳು  ತ್ವರಿತವಾಗಿ ಗಮನಹರಿಸಿ ರೈತರ ಸಂಕಷ್ಟವನ್ನು ಹೋಗಲಾಡಿಸಬೇಕಾಗಿದೆ. ಎಲ್ಲ ಜಮೀನುಗಳಿಗೆ ನೀರು ಹರಿಯುವಂತಾಗಬೇಕಿದೆ.  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.