ADVERTISEMENT

`ನೊಂದವರಿಗೆ ಅವ್ವನ ಸಾಂತ್ವನ'

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 7:03 IST
Last Updated 3 ಡಿಸೆಂಬರ್ 2012, 7:03 IST

ಗದಗ: ಅಂಧ, ಅನಾಥ, ಅಂಗವಿಕಲರ ಹಾಗೂ ನೊಂದವರ ಬಾಳಲ್ಲಿ ಭರವಸೆ ತುಂಬುವ ಸದಾಶಯದೊಂದಿಗೆ ಆರಂಭಗೊಂಡ `ಅವ್ವ' ಸೇವಾ ಟ್ರಸ್ಟ್ ಈಗಾಗಲೇ ಕೆಲವರ ಬಾಳಲ್ಲಿ ಬೆಳಕು ಮೂಡಿಸಿ ಬುದುಕುವ ಉತ್ಸಾಹ ಹೆಚ್ಚಿಸಿದೆ. ಮುಂದೆಯೂ ಇದೇ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋಗುವು ದಾಗಿ `ಅವ್ವ' ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಪತಿಯನ್ನು ಕಳೆದುಕೊಂಡು ಕಳದೆ 10 ತಿಂಗಳಿಂದ ಆಸ್ಪತ್ರೆಯನ್ನೇ ಆಸರೆಯಾಗಿಸಿ ಕೊಂಡಿರುವ ಶಿರಹಟ್ಟಿ ತಾಲ್ಲೂಕಿನ ಖಾನಾಪುರ ಗ್ರಾಮದ ರೇಣುಕಾ ಹೆಗ್ಗಣ್ಣವರ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ ನಂತರ ಅವರು ಮಾತನಾಡಿದರು.

ರೇಣುಕಾ ಹೆಗ್ಗಣ್ಣವರ ಕುಟುಂಬಕ್ಕೆ ಆರ್ಥಿಕ ಸಹಾಯದ ಜೊತೆಗೆ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಡಿ. 8ರಂದು ಹುಬ್ಬಳ್ಳಿಯ ಗುಜರಾತ ಭವನದಲ್ಲಿ ನಡೆಯಲಿರುವ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಪುಣ್ಯಸ್ಮರಣೆ ಹಾಗೂ `ಅವ್ವ'  ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ರೇಣುಕಾ ಹೆಗ್ಗಣ್ಣವರ ಕುಟುಂಬಕ್ಕೆ ಸ್ಥಿರ ಠೇವಣಿ ಪತ್ರ ನೀಡುವುದಾಗಿ ತಿಳಿಸಿದರು.

ನಂತರ ಅವರು ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಡಾ. ಬಸವರಾಜ ಧಾರವಾಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ  ವಿಶ್ವನಾಥ ಕಪ್ಪತ್ತನವರ, ಪ್ರಧಾನ ಕಾರ್ಯದರ್ಶಿ ಅಂದಾನಯ್ಯ ಕುರ್ತಕೋಟಿಮಠ, ದಾವಲ್ ಮುಳಗುಂದ, ಘಟಕದ ಅಧ್ಯಕ್ಷ ಉಮೇಶ ಕಲಬುರ್ಗಿ, ಹನುಮಂತಗೌಡ ಕಲ್ಮನಿ, ಯೋಗೀಶ ಹಿರೇಮಠ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.