ADVERTISEMENT

ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 6:40 IST
Last Updated 14 ಅಕ್ಟೋಬರ್ 2011, 6:40 IST
ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ
ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ   

ಲಕ್ಷ್ಮೇಶ್ವರ: ಈ ಬಾರಿ ತಾಲ್ಲೂಕಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು ಕೂಡಲೇ ಶಿರಹಟ್ಟಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಪಕ್ಷಾತೀತ ರೈತಪರ ಹೋರಾಟ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಒತ್ತಾಯಿಸಿದ್ದಾರೆ.

ಈಚೆಗೆ ರೈತ ಕೆಂಚನಗೌಡ ಪಾಟೀಲ ಅವರ ಹೊಲಕ್ಕೆ ಭೇಟಿ ನೀಡಿ ಒಣಗುತ್ತಿರುವ ಬಳ್ಳಿ ಶೇಂಗಾವನ್ನು ವೀಕ್ಷಣೆ ಮಾಡಿದ ಅವರು `ತಾಲ್ಲೂಕಿನಲ್ಲಿ ಬಹು ಸಂಖ್ಯೆ ರೈತರು ಮಳೆಯನ್ನೇ ನಂಬಿದ್ದಾರೆ. ಆದರೆ ಈ ವರ್ಷ ಮುಂಗಾರು ಮಳೆ ಸರಿಯಾಗಿ ಆಗಿಲ್ಲ. ಹೀಗಾಗಿ ಬೆಳೆಗಳೆಲ್ಲ ಒಣಗಿದ್ದು ರೈತರು ಆತಂಕದಲ್ಲಿದ್ದಾರೆ.
 
ಬೆಳೆ ಬಾರದೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೆ ಸರ್ಕಾರ ತಾಲ್ಲೂಕನ್ನು ಬರಗಾಲ ಪೀಡಿತ ತಾಲ್ಲೂಕು ಪಟ್ಟಿಯಲ್ಲಿ ತಾಲ್ಲೂಕಿನ ಹೆಸರನ್ನು~ ಎಂದು ಪದ್ಮರಾಜ ಪಾಟೀಲ ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಂಕರಗೌಡ ಪಾಟೀಲ, ಮಂಜು ಮುಳಗುಂದ, ಬಸನಗೌಡ ಪಾಟೀಲ, ಶಾಮಣ್ಣ ಸವಣೂರು, ಟಾಕನಗೌಡ ಪಾಟೀಲ, ಶೇಖಣ್ಣ ಗೋಡಿ, ಬಸವರಾಜ ಬಡ್ನಿ, ಶಂಕರ ಬಾಳಿಕಾಯಿ, ಸೋಮು ಪಾಟೀಲ, ನಾಗರಾಜ ಮಲಗಣ್ಣವರ, ನಿಂಗಪ್ಪ ಮಜ್ಜಿಗುಡ್ಡ ಮತ್ತಿತರರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.