ADVERTISEMENT

ಬೆಳವಣಿಕಿಯಲ್ಲಿ ಹಾನಿ ಬೆಳೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 6:35 IST
Last Updated 21 ಅಕ್ಟೋಬರ್ 2017, 6:35 IST

ಬೆಳವಣಿಕಿ (ರೋಣ ತಾ.): ಗ್ರಾಮದಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಮೊಬೈಲ್‌ ಆ್ಯಪ್ ಮೂಲಕ ಬೆಳೆ ಹಾನಿ ಸಮೀಕ್ಷೆ ಕೈಗೊಂಡರು.
ಈರುಳ್ಳಿ, ಶೇಂಗಾ, ಗೋವಿನಜೋಳ ಸೇರಿ ವಿವಿಧ ಬೆಳೆಗಳ ಹಾನಿ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

‘ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ಲಾಟ್‌ಗಳಿವೆ. ದಿನಕ್ಕೆ 40ರಿಂದ 50 ಗದ್ದೆಗಳಲ್ಲಿ ಬೆಳೆ ಹಾನಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಅವಧಿಯಲ್ಲಿ ಸಮೀಕ್ಷಾ ಕಾರ್ಯ ಮುಗಿಸಬೇಕಿದೆ’ ಎಂದು ಗ್ರಾಮ ಲೆಕ್ಕಾಧಿಕಾರಿ ಹೇಳಿದರು.

ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ, ಕಂದಾಯ ನಿರೀಕ್ಷಕ ಆರ್.ಸಿ.ಬಾರಕೇರ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೈತ ಶರಣಬಸವೇಶ್ವರ ಕುಸುಗಲ್, ಶಿವರಡ್ಡಿ ಹಳ್ಳಿಕೇರಿ, ಬಸಲಿಂಗಪ್ಪ ಕುಸುಗಲ್, ಪುಟ್ಟು ಜಗಾಪುರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.