ADVERTISEMENT

ಮಕ್ಕಳ ಬೆಳವಣಿಗೆಗೆ ಪೋಷಕಾಂಶ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 10:25 IST
Last Updated 25 ಜನವರಿ 2012, 10:25 IST
ಮಕ್ಕಳ ಬೆಳವಣಿಗೆಗೆ ಪೋಷಕಾಂಶ ಅಗತ್ಯ
ಮಕ್ಕಳ ಬೆಳವಣಿಗೆಗೆ ಪೋಷಕಾಂಶ ಅಗತ್ಯ   

ನರೇಗಲ್: ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಪೂರಕವಾಗಿರುವ ಕ್ಯಾಲ್ಸಿಯಂ  ಪೋಷಕಾಂಶಗಳ ಅಗತ್ಯತೆ ಬಹು ಮಹತ್ವದಾಗಿದೆ ಎಂದು ರೋಟರಿ ಕ್ಲಬ್‌ನ ಅಧ್ಯಕ್ಷ ಡಾ. ಎನ್.ಎಲ್. ಗ್ರಾಮಪುರೋಹಿತ ಹೇಳಿದರು.

ಸಮೀಪದ ಕೊಚಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ರೋಟರಿ ಕ್ಲಬ್ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು
.
ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಮಾತ್ರ ಸಾಲದು, ಮಕ್ಕಳ ಶಿಕ್ಷಣದ ಜೋತೆಗೆ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಅಗತ್ಯವಿದೆ. ಬಾಲ್ಯದಲ್ಲಿ ಮಕ್ಕಳಿಗೆ ಬರುವ ಬಹುಪಾಲು ರೋಗಗಳು ಅವರ ಅಶುಚಿತ್ವಕ್ಕೆ ಸಂಬಂಧಿಸಿದವುಗಳಾಗಿವೆ.
 
ಬೆಳವಣಿಗೆಯ ಕುಂಟಿತಕ್ಕೆ ಕಾರಣವಾಗಿರುವ ಅಪೌಷ್ಠಿಕ ಆಹಾರ ಸೇವನೆ, ಬಾಲ್ಯದಲ್ಲಿ ಮಕ್ಕಳಲ್ಲಿ ಕಾಣಿಸಿಕೂಳ್ಳುವ ಅತಿಸಾರ, ಜ್ವರ ಭಾದೆ ಇತರೆ ಸಾಮನ್ಯ ರೋಗಗಳು, ತಂದೆ ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸದೆ ಇರುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಡಾ. ಡ್ಯಾನಿಯಲ್ ಫ್ರೆಡರಿಕ್ಸ್ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಸ್. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಡಾ. ಆರ್.ಕೆ. ಗಚ್ಚಿನಮಠ, ಡಾ. ಕೆ.ಜಿ. ಕಾಳೆ, ಬಿ.ಬಿ. ಅಯ್ಯನಗೌಡ್ರ, ಎ.ಜಿ. ಮಾಲಗಿತ್ತಿಮಠ, ಎಸ್.ವಿ. ಅಯ್ಯನಗೌಡ್ರ, ಎ.ಎಸ್. ಮಲಕಸಮುದ್ರಮಠ ಮತ್ತಿತರರು ಹಾಜರಿದ್ದರು. ಶಿಕ್ಷಕ ವಿ.ಎಂ. ಹುಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್. ಅಣಗೌಡರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.