ADVERTISEMENT

ಮಳೆಗಾಗಿ ರೈತ ಮಹಿಳೆಯರಿಂದ ವ್ರತ !

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 10:50 IST
Last Updated 27 ಜೂನ್ 2012, 10:50 IST

ರೋಣ: ಮಳೆಯಿಲ್ಲದೆ ಬೆಳೆಯಿಲ್ಲ. ಬೆಳೆ ಬಾರದಿದ್ದರೆ ಜೀವನ ನಿರ್ವಹಣೆ ಬಲು ಕಷ್ಟ ಎಂದು ಪಟ್ಟಣದ ಗೌಡ್ರ ಓಣಿಯ ಮಹಿಳೆಯರು ಮಳೆರಾಯನನ್ನು ಒಲಿಸಿ ಕೊಳ್ಳಲು  ಕಳದೆ ಒಂಬತ್ತು ದಿನಗಳಿಂದ ವ್ರತದಲ್ಲಿ  ನಿರತರಾಗಿದ್ದಾರೆ.

ಓಣಿಯಲ್ಲಿ ಮುಸ್ಲಿಂ, ಹಿಂದೂ ಮಹಿಳೆಯರು ಸೇರಿ ಪಟ್ಟಣದ ದೇವ ಸ್ಥಾನಕ್ಕೆ ಬೆಳಿಗ್ಗೆ 4 ಗಂಟೆಗೆ ಮುಡಿಯಲ್ಲಿ  ತೆರಳಿ ಕುಂಬದ ನೀರು ಹಾಕಿ ಪೂಜೆ ಸಲ್ಲಿಸುತ್ತಾರೆ. ನಂತರ ಈಶ್ವರ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಪೂಜೆ ನಡೆಸಿ ಮಳೆಗಾಗಿ ಪ್ರಾರ್ಥಿ ಸುತ್ತಾರೆ.

ವರುಣ ದೇವನ ಮುನಿಸು ಕಡಿಮೆ ಮಾಡಿ, ಧರೆಯನ್ನು ತಂಪು ಗೊಳಿಸ ಬೇಕು. ಇಲ್ಲದಿದ್ದರೆ ಜನ, ಜಾನು ವಾರು ಬದುಕುವುದು ಕಷ್ಟ ಎಂದು ಅರಿತಿರುವ ರೈತ ಕುಟುಂಬಗಳು ಓಣಿಯಲ್ಲಿ ಎಲ್ಲರೂ ಸೇರಿ (ಪ್ರಸಾದ) ಅಡುಗೆ ತಯಾರಿಗೊಳಿಸಿ ವರುಣ ದೇವನಿಗೆ ಎಡೆ ಮಾಡಿ ನಂತರ ಎಲ್ಲರೂ ಸೇರಿ  ಅದನ್ನು ಸ್ವೀಕರಿಸಿ ವರುಣ ದೇವನ ನಾಮಸ್ಮರಣೆಯಲ್ಲಿ ನಿರತ ರಾಗುತ್ತಾರೆ.

ಸತತ ಎರಡು ವರ್ಷಗಳಿಂದ ವರುಣ ದೇವ ಸಮಸ್ತ ರೈತರ ಮೇಲೆ ಮುನಿಸಿ ಕೊಂಡವನಂತೆ ಕಾಣುತ್ತಿರುವುದು ಮೇಲ್ನೋಟಕ್ಕೆ ಸಾಬಿತಾಗಿದೆ. ಭೂ ಲೋಕಕ್ಕೆ ಬಾರದವಂತೆ ಹಟ ಹಿಡಿದಿರುವುದಕ್ಕೆ ರೈತರು ವರುಣ ದೇವನನ್ನು ಒಲಿಸಿ ಕೊಳ್ಳಲು ಭಕ್ತಿಯ ಸಾಗರದಲ್ಲಿ ಮುಳುಗುತ್ತಿದಾರೆ. ವರುಣ ತೇಲಿಸು ವನೂ ಅಥವಾ ಮುಳುಗಿಸುವನೋ ನೋಡೋಣ ಎನ್ನು ವುದು ರೈತ ಮುತ್ತಣ್ಣ ಯಲಿ ಗಾರರ ಮಾತು.

ಗೌಡ್ರ ಓಣಿಯ ಹಿಂದೂ, ಮುಸ್ಲಿಂ ಮಹಿಳೆಯರು ಕೈಗೊಂಡಿರುವ ವ್ರತ ಕಾರ್ಯದಲ್ಲಿ  ಮಮತಾಜ್ ಬಿಲ್ಲುಖಾನ್, ನೀಲಮ್ಮ ನವಲಗುಂದ, ಗೌರಮ್ಮ ಪಾಟೀಲ, ಶಹನಾಜ್ ಬಿಲ್ಲುಖಾನ್,ಜಯಶ್ರೀ ಹೊಸಮನಿ, ಯಲ್ಲಮ್ಮ ನವಲಗುಂದ, ಪಾರ್ವತ್ವವ್ವ ಡಂಬಳ, ಲಕ್ಷ್ಮಿ ತೋಟಗಂಟಿ, ಬಸವ್ವ ಡಂಬಳ, ಅನ್ನಪೂರ್ಣಾ ತೋಟಗಂಟಿ, ರೇಣವ್ವ ಜಿಡ್ಡಿಬಾಗಿಲ, ಯಲ್ಲವ್ವ ತುಂಬದ, ರುದ್ರವ್ವ ನವಲಗುಂದ, ಅನ್ನಪೂರ್ಣ ಶಾಡ್ಲಗೇರಿ, ಶೋಭಾ ನವಲಗುಂದ ವ್ರತದಲ್ಲಿ ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.