ADVERTISEMENT

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 5:55 IST
Last Updated 22 ಮಾರ್ಚ್ 2011, 5:55 IST

ನರೇಗಲ್: ಶಿವಯೋಗ ಮಂದಿರವು ಶಾಂತಿ, ಸೌಹಾರ್ಧತೆ, ಕೋಮು ಸಾಮರಸ್ಯವನ್ನು ಪಾಲಿಸುವ ಮೂಲಕ ಎಲ್ಲ ಧರ್ಮೀಯರನ್ನು ಅಪ್ಪಿಕೊಳ್ಳುವ ಮಠವಾಗಿದೆ ಎಂದು ಧಾರವಾಡದ ಹ್ಯಾಪಿಲಿ ಲಿವಿಂಗ್ ಫೌಂಡೇಶನ್ ಆಶ್ರಮದ ಎ.ಪಿ. ಪಾಟೀಲ ಗುರೂಜಿ ಹೇಳಿದರು. ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗಮಂದಿರದಲ್ಲಿ ಇತ್ತೀಚೆಗೆ ನಡೆದ ಲಿಂ. ಹಾನಗಲ್ ಕುಮಾರ ಶಿವಯೋಗಿಗಳ 81ನೇ ವಾರ್ಷಿಕ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾಮಹೋತ್ಸವದಲ್ಲಿ ಮಾತನಾಡಿದರು.

ಜೀವನದಲ್ಲಿ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಅಭಿನವ ಅನ್ನದಾನ ಸ್ವಾಮೀಜಿ ಆಶೀರ್ವಚನ ನೀಡಿ, ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ಆದರ್ಶ ಧರ್ಮದ ನೆಲೆಗಟ್ಟನ್ನು ಭದ್ರಪಡಿಸಿದರು. ಸ್ವಾಸ್ಥ್ಯ ಸಮಾಜ, ಶಿಕ್ಷಣ, ಆರೋಗ್ಯ ಪರಿಕಲ್ಪನೆಗೆ ದಾರಿದೀಪವಾಗಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಸಂಸದ ಆರ್.ಎಸ್. ಪಾಟೀಲ ಮಾತನಾಡಿದರು. ಗಂಗಾವತಿಯ ಕಲ್ಮಠದ ಡಾ. ಕೊಟ್ಟೂರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನಿಡಗುಂದಿಕೊಪ್ದದ ಶಿವಬಸವ ಸ್ವಾಮೀಜಿ, ರೋಣದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ನಿಂಗನಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಎ.ಎಚ್. ಬಿಚ್ಚೂರ, ಗ್ರಾಮ ಪಂಚಾಯ್ತಿ ಸದಸ್ಯ ಅಮಾತೆಪ್ಪ ಮಾಸ್ತಿ, ಮಲ್ಲಪ್ಪ ಸರ್ವಿ, ಮುದಕಪ್ಪ ಕುರಿ, ಕಳಕಪ್ಪ ಸೂಡಿ, ಬಾಳಪ್ಪ ಗುಜಮಾಗಡಿ, ಕಳಕಪ್ಪ ಸರ್ವಿ, ಅಂದಪ್ಪ ಬನ್ನಿಗೋಳ ಮತ್ತಿತರರು ಹಾಜರಿದ್ದರು.

ಶೋಭಾ ಚಿಕ್ಕನಗೌಡರ, ಸಂಗಮೇಶ ತುಳುಕೇರಿ, ಕಳಕಮಲ್ಲಯ್ಯ ಅಣ್ಣಿಗೇರಿ, ದ್ಯಾಮಣ್ಣ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಮಾರನಬಸರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಕಂಸಾಳೆ ನೃತ್ಯ ನಡೆಯಿತು. ಕುಮಾರ ದಡ್ಡೂರ ಸ್ವಾಗತಿಸಿದರು. ಶಿಕ್ಷಕ ಆರ್.ವಿ. ಬೆಲ್ಲದ ಕಾರ್ಯಕ್ರಮ ನಿರೂಪಿಸಿದರು. ಪಿ,ವಿ. ಸರ್ವಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.